ಉದಯವಾಹಿನಿ, ವಿಶ್ವದಲ್ಲಿ ಕೆಲವೊಬ್ಬರ ಶ್ರೀಮಂತಿಕೆ ಲೆಕ್ಕ ಹಾಕೋಕೆ ಆಗಲ್ಲ ಅಷ್ಟೊಂದು ಹಣ, ಆಸ್ತಿ ಗಳಿಕೆ ಮಾಡಿದ್ದಾರೆ. ಇಂತಹ ಅಗರ್ಭ ಶ್ರೀಮಂತರು ಎಂತಹ ಬೆಲೆ ಬಾಳೋ ವಸ್ತುವನ್ನಾಗಲಿ ಖರೀದಿ ಮಾಡುವ ಆಸಕ್ತಿ ಹೊಂದಿರುತ್ತಾರೆ. ಅದರಂತೆ ನಾವು ದಿನ ಬಳಕೆ ಮಾಡುವ ಕೆಲವೊಂದು ವಸ್ತುಗಳು ನಾವು ಊಹಿಸದ ಮಾದರಿಯಲ್ಲಿ ಬೆಲೆ ಬಾಳುತ್ತವೆ. ಇಲ್ಲೊಂದು ಮಹಿಳೆಯರ ಹೈಹೀಲ್ಸ್ ಚಪ್ಪಲಿ 180 ಕೋಟಿ ರೂಪಾಯಿ ಆಗಿದೆ. ಅತ್ಯಂತ ದುಬಾರಿ ಹೈಹೀಲ್ಸ್ ಅನ್ನು ದುಬೈನ ವಿಹಾರ ನೌಕೆಯಲ್ಲಿ ಇಟಲಿಯ ಆಂಟೋನಿಯೊ ವಿಯೆಟ್ರಿ ಎನ್ನುವರು ಅನಾವರಣ ಮಾಡಿದರು. (ಮೇಡ್ ಇನ್ ಇಟಲಿ, ಡಿಸೈನ್ಡ್ ಇನ್ ಎಮಿರೇಟ್ಸ್) ಫ್ಯಾಶನ್ ವೀಕ್‌ನ ಭಾಗವಾಗಿ ಇವುಗಳನ್ನು ಅನಾವರಣಗೊಳಿಸಲಾಗಿತ್ತು. ಇವುಗಳನ್ನು ಫ್ಯಾಶನ್ ಡಿಸೈನರ್ ಆಂಟೋನಿಯೊ ವಿಯೆಟ್ರಿ ಮೂನ್ ಸ್ಟಾರ್ ಶೂಗಳ ಎಂದು ಎಲ್ಲರಿಗೂ ಪರಿಚಯಿಸಿದರು. ಇವು ವಿಶ್ವದಲ್ಲೇ ಅತ್ಯಧಿಕ ಬೆಲೆ ಬಾಳುವ ಹೈಹೀಲ್ಸ್ ಎಂದು ಹೇಳಲಾಗಿದೆ.
ಫ್ಯಾಶನ್ ಡಿಸೈನರ್ ಆಂಟೋನಿಯೊ, ಇವುಗಳ ಹೀಲ್ಸ್ (ಹಿಂಭಾಗ) ಅನ್ನು ಗಟ್ಟಿ ಬಂಗಾರದಿಂದ ಶೃಂಗಾರ ಮಾಡಿದ್ದಾರೆ. 30 ಕ್ಯಾರೆಟ್ ವಜ್ರಗಳನ್ನು ಇದರಲ್ಲಿ ಅಳವಡಿಕೆ ಮಾಡಲಾಗಿದೆ. ಅರ್ಜೆಂಟೀನಾದ ಮೆಟೆರಿಟೆ ಡೇಟೆಡ್ (ಉಲ್ಕಾಶಿಲೆಯ)ನ 1576 ತುಣುಕುಗಳನ್ನು ಜೋಡಿಸಲಾಗಿದೆ. ಇವುಗಳನ್ನು 2019ರಲ್ಲಿ ದುಬೈನಲ್ಲಿ ಪ್ರದರ್ಶನ ಮಾಡಿದ್ದರು. ಈಗಲೂ ವಿಶ್ವದ ಅತ್ಯಂತ ಕಾಸ್ಟಲಿ ಹೀಲ್ಸ್ ಎಂದು ಪರಿಗಣಿಸಲಾಗಿದೆ. ಇವುಗಳ ಬೆಲೆ 1,80,50,29,716 ರೂಪಾಯಿ ಆಗಿದೆ. ಆಂಟೋನಿಯೊ ಈ ರೀತಿ ಪ್ರದರ್ಶನ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ 2017ರಲ್ಲಿ 24 ಕ್ಯಾರೆಟ್ ಬಂಗಾರದಿಂದ ಶೂಗಳನ್ನು ತಯಾರು ಮಾಡಿ ಖ್ಯಾತಿ ಪಡೆದಿದ್ದರು. ಬಳಿಕ ಇವುಗಳನ್ನು ದುಬೈನ ಬುರ್ಜ್ ಖಲೀಫಾಗೆ ಹೆಲಿಕಾಪ್ಟರ್ ಮೂಲಕ ರವಾನೆ ಮಾಡಲಾಯಿತು. ಇಲ್ಲಿಯೇ ಖರೀದಿ ಮಾಡಲಾಗಿದೆ ಎನ್ನಲಾಗಿದೆ. ಇನು ಈ ಬಗ್ಗೆ ಮಾತನಾಡಿರುವ ಇಟಲಿಯ ಫ್ಯಾಶನ್ ಡಿಸೈನರ್ ಆಂಟೋನಿಯೊ ವಿಯೆಟ್ರಿ ಅವರು, ವಿಶ್ವದಲ್ಲೇ ಅತ್ಯಂತ ಶೂಗಳನ್ನು ಮಾರಾಟ ಮಾಡುವುದು ನಾನೇ, ಇಟಲಿಯ ಟುರಿನ್ ನಗರದಿಂದ ಇವುಗಳನ್ನು ತರಲಾಗಿದೆ. ನನ್ನ ನಗರದ ಬಗ್ಗೆ ನನಗೆ ಹೆಚ್ಚು ಗೌರವವಿದೆ ಎಂದು ಹೇಳಿದ್ದಾರೆ.
