ಉದಯವಾಹಿನಿ, ಈವರೆಗೂ ಆಗಸವು ನೀಲಿ ಬಣ್ಣದಲ್ಲಿ ಇರುವುದನ್ನು ನಾವೆಲ್ಲಾ ನೋಡಿದ್ದೇವೆ. ಸಂಜೆ ಸಮಯದಲ್ಲಿ ಸೂರ್ಯ ಮುಳುಗುವಾಗ ಕೆಂಪು ಬಣ್ಣವನ್ನು ಕೆಲವು ಕಡೆ ಕಾಣಬಹುದು. ಅದು ಬಿಟ್ಟರೇ ಎಲ್ಲ ಕಡೆ ಆಕಾಶ ನೀಲಿ ಬಣ್ಣದಲ್ಲೇ ಕಂಗೊಳಿಸುತ್ತಿರುತ್ತದೆ. ಇದಕ್ಕೆ ಕಾರಣವೂ ನಿಮಗೆಲ್ಲಾ ಗೊತ್ತೇ ಇದೆ. ಆದರೆ ಇತ್ತೀಚೆಗೆ ಆಕಾಶವೂ ಬೇರೆ ಬಣ್ಣ ತಿರುಗುತ್ತಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಎನ್ನುವಂತೆ ಬರ್ಮಿಂಗ್ಹ್ಯಾಮ್‌ನಲ್ಲಿ ಆಗಸ ಕೆಂಗುಲಾಬಿ ಬಣ್ಣಕ್ಕೆ ತಿರುಗಿದೆ.
ಇಂಗ್ಲೆಂಡಿನ ಬರ್ಮಿಂಗ್ಹ್ಯಾಮ್ ಸಿಟಿಯ ಫುಟ್ಬಾಲ್ ಕ್ಲಬ್‌ನ ಸೇಂಟ್ ಆಂಡ್ರ್ಯೂಸ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿತ್ತು. ಈ ವೇಳೆ ಸ್ಟೇಡಿಯಂ ಸುತ್ತ ರಾತ್ರಿ ಸಮಯದಲ್ಲಿ ಆಗಸವೆಲ್ಲಾ ಗುಲಾಬಿ ಬಣ್ಣದಲ್ಲಿ ಕಾಣಿಸಿದೆ. ಇದರಿಂದ ಆಶ್ಚರ್ಯವಾಗಿ ಜನರು, ಆ ದೃಶ್ಯಗಳನ್ನು ತಮ್ಮ ತಮ್ಮ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿದು ವೈರಲ್‌ ಮಾಡಿದ್ದಾರೆ. ಇದನ್ನು ನೋಡಿದ ಎಷ್ಟೋ ಜನರು ಇದು ನಿಜನಾ? ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ಆಕಾಶ ನೀಲಿ ಬಣ್ಣದಿಂದ ಬೇರೆ ಬೇರೆ ಕಲರ್‌ಗೆ ಬದಲಾವಣೆ ಆಗುತ್ತಾ?. ಇಲ್ಲ, ಆಕಾಶ ಬಣ್ಣ ಯಾವಾಗಲೂ ನೀಲಿ ಬಣ್ಣದಲ್ಲಿರುತ್ತದೆ. ಆದರೆ ಸೇಂಟ್ ಆಂಡ್ರ್ಯೂಸ್ ಸ್ಟೇಡಿಯಂ ಸುತ್ತ ಆಕಾಶ ಗುಲಾಬಿ ಬಣ್ಣದಾಗಿ ಕಾಣಿಸಿರುವುದಕ್ಕೆ ಕಾರಣ ಇಷ್ಟೇ. ಬರ್ಮಿಂಗ್ಹ್ಯಾಮ್ ನಗರದ ಫುಟ್ಬಾಲ್ ಕ್ಲಬ್, ಸೇಂಟ್ ಆಂಡ್ರ್ಯೂಸ್ ಸ್ಟೇಡಿಯಂನಲ್ಲಿ ಗುಲಾಬಿ ಎಲ್‌ಇಡಿ ದೀಪಗಳನ್ನು ಆನ್‌ ಮಾಡಲಾಗಿತ್ತು. ಇದೇ ಸಮಯದಲ್ಲಿ ಮಂಜು ಕೂಡ ದಟ್ಟವಾಗಿ ಬೀಳುತ್ತಿತ್ತು. ಮೋಡದಿಂದ ಬೀಳುವ ಹಿಮವನ್ನು ಗುಲಾಬಿ ಬೆಳಕು ಆವರಿಸಿತ್ತು. ಈ ಗುಲಾಬಿ ಬಣ್ಣ ಇಡೀ ಆಕಾಶ ತುಂಬಾ ಹರಡಿದಂತೆ ಭಾಸವಾಗುತ್ತದೆ. ಇದರಿಂದ ಇಡೀ ಆಕಾಶ ಗುಲಾಬಿ ಬಣ್ಣದಲ್ಲಿದೆ. ಹವಾಮಾನ ತಜ್ಞರ ಪ್ರಕಾರ ಹಿಮ ಮತ್ತು ಮೋಡ ಯಾವಾಗಲೂ ಕನ್ನಡಿಗಳಂತೆ ಇರುತ್ತವೆ. ಈ ವೇಳೆ ಯಾವುದೇ ಬೆಳಕನ್ನು ಪ್ರತಿಫಲಿಸುತ್ತವೆ. ಹೀಗಾಗಿ ಅಲ್ಲಿ ಮೋಡ ಗುಲಾಬಿ ಬಣ್ಣದಲ್ಲಿ ಕಂಡಿದೆ ಅಷ್ಟೇ.

Leave a Reply

Your email address will not be published. Required fields are marked *

error: Content is protected !!