ಉದಯವಾಹಿನಿ, ನವಿ ಮುಂಬೈ: ಹರ್ಮನ್‌ಪ್ರೀತ್ ಕೌರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಗುಜರಾತ್ ವಿರುದ್ಧ ಮುಂಬೈ ಇಂಡಿಯನ್ಸ್ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಟಾಪ್ 2 ಸ್ಥಾನಕ್ಕೇರಿದೆ. ಟಾಸ್ ಗೆದ್ದು ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಗುರಿ ಬೆನ್ನತ್ತಿದ ಮುಂಬೈ 19.2 ಓವರ್‌ಗೆ ಗುರಿ ತಲುಪಿ 7 ವಿಕೆಟ್‌ಗಳ ಗೆಲುವು ದಾಖಲಿಸಿತು.
ಗುಜರಾತ್ ಪರ ಜಾರ್ಜಿಯಾ ವೇರ್‌ಹ್ಯಾಮ್ ಔಟಾಗದೇ 43, ಭಾರ್ತಿ ಫುಲ್ಮಾಲಿ ಔಟಾಗದೇ 36, ಕನಿಕಾ ಅಹುಜಾ 35, ಬೆತ್ ಮೂನಿ 33 ರನ್ ಗಳಿಸಿದರು. ಇವರ ಜವಾಬ್ದಾರಿಯುತ ಆಟದಿಂದ ಗುಜರಾತ್ ಸವಾಲಿನ ಮೊತ್ತವನ್ನು ಪೇರಿಸಿತು.
ಮುಂಬೈ ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಅಬ್ಬರದಿಂದ ತಂಡಕ್ಕೆ ಗೆಲುವು ತಂದುಕೊಟ್ಟರು. ಔಟಾಗದೇ 43 ಬಾಲ್‌ಗೆ 7 ಫೋರ್, 2 ಸಿಕ್ಸರ್‌ನೊಂದಿಗೆ 71 ರನ್ ಗಳಿಸಿದರು. ಅಮನ್‌ಜೋತ್ ಕೌರ್ 40, ನಿಕೋಲಾ ಕ್ಯಾರಿ 38 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.
