ಉದಯವಾಹಿನಿ , ನವದೆಹಲಿ: ತಡರಾತ್ರಿ ವೇಳೆ ಗ್ರಾಹಕರು ಕೆಳಮಹಡಿಗೆ ಬರಲು ನಿರಾಕರಿಸಿದ್ದರಿಂದ ಜೊಮ್ಯಾಟೊ ಏಜೆಂಟ್ ತಂದಿದ್ದ ಆರ್ಡರ್ ಅನ್ನು ತಾನೇ ತಿಂದಿದ್ದಾರೆ. ಗ್ರಾಹಕರು ತಡರಾತ್ರಿ ಕೆಳಗೆ ಬಂದು ಆರ್ಡರ್ ತೆಗೆದುಕೊಳ್ಳಲು ನಿರಾಕರಿಸಿದ ನಂತರ ಫುಡ್ ಡೆಲಿವರಿ ಬಾಯ್ ಸ್ವತಃ ಆರ್ಡರ್ ತಾನೇ ಸೇವಿಸಿದ್ದಾರೆ. ಡೆಲಿವರಿ ಬಾಯ್ ಅಂಕುರ್ ಠಾಕೂರ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಗ್ರಾಹಕರು ಕೆಳಗೆ ಬರಲು ಮಾಡಿದ ವಿನಂತಿಯು ಹೇಗೆ ಜಗಳಕ್ಕೆ ಕಾರಣವಾಯಿತು ಎಂಬುದನ್ನು ಠಾಕೂರ್ ವಿವರಿಸುತ್ತಾರೆ. ಗ್ರಾಹಕರು ತಮ್ಮ ಬಾಲ್ಕನಿಯಿಂದ ಕೂಗಿದರು. ಆಹಾರಕ್ಕಾಗಿ ಹಣ ಪಾವತಿಸಿದ್ದರಿಂದ, ಡೆಲಿವರಿ ಬಾಯ್ ಅದನ್ನು ತಮ್ಮ ಮನೆ ಬಾಗಿಲಿಗೆ ತಲುಪಿಸಬೇಕೆಂದು ಒತ್ತಾಯಿಸಿದರು. ಆದರೆ, ಠಾಕೂರ್ ಈಗ ತಡರಾತ್ರಿ 2:30 ಎಂದು ವಾದಿಸಿದ್ದರು. ನಾನು ಬೈಕನ್ನು ಇಲ್ಲಿ ಬಿಟ್ಟು ಮೇಲೆ ಬಂದರೆ, ಯಾರಾದರು ನನ್ನ ಬೈಕ್ ಕಳ್ಳತನ ಮಾಡಬಹುದು. ಈ ಚಳಿಯಲ್ಲಿ ಓಡಾಡುವುದು ಕಷ್ಟ. ಆದ್ದರಿಂದ ಗ್ರಾಹಕರು ಸ್ವಲ್ಪ ಸಹಕರಿಸಬೇಕು ಎಂದು ಠಾಕೂರ್ ಕೇಳಿಕೊಂಡಿದ್ದರು. ಆರ್ಡರ್‌ನ್ನು ಮೇಲಕ್ಕೆ ತೆಗೆದುಕೊಂಡು ಬನ್ನಿ, ಇಲ್ಲವೇ ಕ್ಯಾನ್ಸಲ್ ಮಾಡಿ ಎಂದು ಗ್ರಾಹಕರು ತಿಳಿಸಿದರು. ಅದಕ್ಕೆ ನಾನು ಆರ್ಡರ್ ಕ್ಯಾನ್ಸಲ್ ಮಾಡಿದೆ. ಅದನ್ನು ನಾನೇ ತಿನ್ನುತ್ತೇನೆಂದು, ಗುಲಾಬ್ ಜಾಮೂನ್ ಅನ್ನು ಫುಡ್ ಡೆಲಿವರಿ ಬಾಯ್ ತಾನೇ ಸೇವಿಸಿದ್ದಾರೆ. ಅದರ ಜೊತೆಗೆ ಬಿರಿಯಾನಿ ಕೂಡ ಇತ್ತು. ಅದನ್ನೂ ಸೇವಿಸಿದ್ದಾರೆ.
