ಉದಯವಾಹಿನಿ , ಅಮರಾವತಿ: ಆಂದ್ರ ಪ್ರದೇಶದ ತೆನಾಲಿ ಇನ್ನಿತರ ಭಾಗಗಳಲ್ಲಿ ಹಬ್ಬಗಳ ಸಮಯದಲ್ಲಿ ಅಳಿಯಂದಿರಿಗೆ ರಾಜ ಮರ್ಯಾದೆ ನೀಡಲಾಗುತ್ತದೆ. ಈ ಪ್ರದೇಶದಲ್ಲಿ ಹಿಂದಿನಿಂದಲೂ ಇಂತಹ ಸಂಪ್ರದಾಯ ಇದೆ. ಆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದ ಕುಟುಂಬವೊಂದು ಅಳಿಯನಿಗಾಗಿ 158 ಬಗೆಯ ಖಾದ್ಯಗಳನ್ನು ತಯಾರಿಸಿ ಭಾರೀ ಔತಣಕೂಟ ಆಯೋಜಿಸಿ ಮಕರ ಸಂಕ್ರಾಂತಿಯನ್ನು ಆಚರಿಸಿದೆ.
ತೆನಾಲಿಯ ಪ್ರಸಿದ್ಧ ಉದ್ಯಮಿ ದಂಪತಿ ವಂದನಪು ಮುರಳೀಕೃಷ್ಣ ಮತ್ತು ಮಾಧವಿಲತಾ, ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂ ಮೂಲದ ತಮ್ಮ ಅಳಿಯ ಶ್ರೀದತ್ತ ಅವರಿಗೆ ಈ ವಿಶೇಷ ಔತಣಕೂಟ ಏರ್ಪಡಿಸಿತ್ತು. ಮಗಳು ಮೌನಿಕಾ ಕಳೆದ ವರ್ಷ ಶ್ರೀದತ್ತ ಅವರೊಂದಿಗೆ ಸಪ್ತಪದಿ ತುಳಿದಿದ್ದರು. ಈ ಸಂಕ್ರಾಂತಿಯು ಅಳಿಯನಿಗೆ ಮೊದಲ ಸಂಕ್ರಾಂತಿ ಹಬ್ಬವಾಗಿದ್ದು, ಈ ವಿಶೇಷ ಆತಿಥ್ಯ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!