ಉದಯವಾಹಿನಿ ,ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್‌ಬ್ಯಾಷ್ ಟೂರ್ನಿಯನ್ನು ತೊರೆದು ತವರಿಗೆ ಮರಳುವಂತೆ ಮೊಹಮ್ಮದ್ ರಿಝ್ವಾನ್‌ಗೆ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕಮ್ರಾಲ್ ಅಕ್ಮಲ್ ) ಆಗ್ರಹಿಸಿದ್ದಾರೆ. ರಿಝ್ವಾನ್ ಪ್ರಸ್ತುತ ಈ ಟೂರ್ನಿಯಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ, ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಮೊಹಮ್ಮದ್ ರಿಝ್ವಾನ್ ಅವರು ಬಿಗ್‌ಬ್ಯಾಷ್ ಲೀಗ್ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಿಂದ 20.87ರ ಸರಾಸರಿ ಹಾಗೂ 101.82ರ ಸ್ಟ್ರೈಕ್ ರೇಟ್‌ನಲ್ಲಿ 167 ರನ್‌ಗಳನ್ನು ಕಲೆ ಹಾಕಿದ್ದರು. ಅಲ್ಲದೆ ಸಿಡ್ನಿ ಥಂಡರ್ ವಿರುದ್ಧದ ಪಂದ್ಯದಲ್ಲಿ 23 ಎಸೆತಗಳಲ್ಲಿ 26 ರನ್ ಗಳಿಸಿ ಆಡುತ್ತಿದ್ದ ಮೊಹಮ್ಮದ್ ರಿಝ್ವಾನ್ ಅವರನ್ನು ರಿಟೈರ್ ಔಟ್ ಆಗುವಂತೆ ಸೂಚಿಸಲಾಗಿತ್ತು. ಮೆಲ್ಬೋರ್ನ್ ರೆನೆಗೃಡ್ಸ್ ತಂಡದ ಟೀಮ್ ಮ್ಯಾನೇಜ್‌ಮೆಂಟ್ ಅವರನ್ನು ರಿಟೈರ್ ಔಟ್ ಆಗುವಂತೆ ಸೂಚನೆ ನೀಡಿದ ಬಳಿಕ ರಿಝ್ವಾನ್ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಕಮ್ರಾನ್ ಅಕ್ಮಲ್ ಅವರು ಇದನ್ನು ಅವಮಾನಕರ ಎಂದು ದೂರಿದ್ದಾರೆ.
2008ರ ಉದ್ಘಾಟನಾ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನ ಮಾಜಿ ನಾಯಕ ಯೂನಿಸ್ ಖಾನ್‌ಗೆ ಆದ ರೀತಿ ಇದೀಗ ಬಿಗ್‌ಬ್ಯಾಷ್ ಲೀಗ್ ಟೂರ್ನಿಯಲ್ಲಿ ಮೊಹಮ್ಮದ್ ರಿಝ್ವಾನ್‌ಗೆ ಆಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
“ಬಾಬರ್ ಆಝಮ್ ಮತ್ತು ಮೊಹಮ್ಮದ್ ರಿಝ್ವಾನ್ ತಮ್ಮ ಸ್ಟ್ರೈಕ್ ರೇಟ್‌ಗಳನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂಬುದರ ಕುರಿತು ನಾವು ವಿವಿಧ ಕಾರ್ಯಕ್ರಮಗಳಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ದೀರ್ಘವಾಗಿ ಮಾತನಾಡಿದ್ದೇವೆ. ರಿಝ್ವಾನ್‌ಗೆ ಏನಾಯಿತು ಎಂಬುದು ಪ್ರಪಂಚದಾದ್ಯಂತ ಅಪಹಾಸ್ಯಕ್ಕೆ ಕಾರಣವಾಯಿತು ಮಾತ್ರವಲ್ಲದೆ ಅವಮಾನದ ಭಾವನೆಯನ್ನೂ ಸೃಷ್ಟಿಸಿದೆ. ರಿಝ್ವಾನ್ ಲೀಗ್ ತೊರೆದು ಮನೆಗೆ ಮರಳಬೇಕು ಎಂದು ಕೆಲವರು ಹೇಳುತ್ತಿದ್ದಾರೆ,”ಎಂದು ಜಿ ಟಿವಿ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
