ಉದಯವಾಹಿನಿ , ಕುರುಕ್ಷೇತ್ರ, ಹರಿಯಾಣ: ಒಂದು ದಿನ ಯಾರಿಂದಲೋ ಹೊಡೆತ ತಿಂದ ಗರ್ಭಿಣಿ ಬೀದಿ ನಾಯಿಯೊಂದು ತನ್ನ ಮರಿಗಳನ್ನು ತನ್ನ ಗರ್ಭದಲ್ಲೇ ಕಳೆದುಕೊಂಡು ಯಾತನೆ ಅನುಭವಿಸುತ್ತಿತ್ತು. ಇದನ್ನು ಕಂಡ ಪೂನಂ ಶರ್ಮಾ ಅವರ ಮನ ಕರಗಿತು. ಕರಳು ಚುರುಕ್ ಎಂದಿತು. ಅಂದು ಕಂಡ ಈ ದೃಶ್ಯಗಳ ಪೂನಂ ಅವರ ಮನಸ್ಸನ್ನು ಶಾಶ್ವತವಾಗಿ ಬದಲಾಯಿಸಿ ಬಿಟ್ಟಿತು. ಇದಕ್ಕಾಗಿ ಅವರು ಬೋಧನಾ ವೃತ್ತಿಯನ್ನೇ ತೊರೆದರು. ನಾಯಿಗಳಿಗಾಗಿ ಕೆಲಸ ಮಾಡಲು ನಿರ್ಧರಿಸಿದರು, ಅದರಲ್ಲೂ ಬೀದಿ ನಾಯಿಗಳನ್ನು ರಕ್ಷಿಸಲು, ಚಿಕಿತ್ಸೆ ನೀಡಲು ಮತ್ತು ಸಂತಾನಹರಣ ಮಾಡಲು, ಎಲ್ಲಾ ವೆಚ್ಚವನ್ನು ಅವರೇ ಭರಿಸಲು ಆರಂಭಿಸಿದರು.

ಬೀದಿ ನಾಯಿಗಳಿಗೆ ಆಹಾರ ನೀಡುವ ಜವಾಬ್ದಾರಿಯಾಗಿ ಪ್ರಾರಂಭವಾದದ್ದು ಇಂದು ಪೂರ್ಣ ಪ್ರಮಾಣದ ಕಾರ್ಯಾಚರಣೆಯಾಗಿ ಬೆಳೆದಿದೆ. ಹರಿಯಾಣದಾದ್ಯಂತ ಸಾವಿರಾರು ಗಾಯಗೊಂಡ ಮತ್ತು ಕೈಬಿಡಲಾದ ಪ್ರಾಣಿಗಳಿಗೆ ಸಹಾಯ ಮಾಡುವ ಪ್ರಾಣಿ ಆಶ್ರಯವನ್ನು ಏಂಜೆಲ್ ಪೂನಂ ಶರ್ಮಾ ನಡೆಸುತ್ತಿದ್ದಾರೆ. ಹೀಗೆ ಆರಂಭವಾದ ಪಯಣ: ಪೂನಂ ತನ್ನ ಪ್ರಯಾಣ ಹೇಗೆ ಪ್ರಾರಂಭವಾಯಿತು ಎಂಬುದನ್ನು ಸದಾ ನೆನಪಿಸಿಕೊಳ್ಳುತ್ತಾರೆ. ಬೀದಿ ನಾಯಿಗಳಿಗೆ ಆಹಾರ ನೀಡಿದ್ದಕ್ಕಾಗಿ ನೆರೆಹೊರೆಯವರಿಂದ ಆಕ್ಷೇಪಣೆಗಳು ಬಂದವು. ಆದರೆ, ಇದ್ಯಾವುದಕ್ಕೂ ಅವರು ತಲೆಕೆಡಿಸಿಕೊಳ್ಳಲಿಲ್ಲ, ಪಟ್ಟುಬಿಡಲಿಲ್ಲ. ಐದು ವರ್ಷಗಳ ಹಿಂದೆ ಪೂನಂ ಶರ್ಮಾ, ತನ್ನ ಇಬ್ಬರು ಸಹೋದರಿಯರೊಂದಿಗೆ ಕುರುಕ್ಷೇತ್ರದ ಮಸಣ ಗ್ರಾಮದ ಬಳಿ ಗೀತಾನ್ ಪ್ರಾಣಿ ಆರೈಕೆ ಕೇಂದ್ರವೊಂದನ್ನು ಸ್ಥಾಪಿಸಿದರು. ಅವರು ತಮ್ಮ ಸ್ವಂತ ಹಣದಿಂದ ಭೂಮಿಯನ್ನು ಖರೀದಿಸಿ ಶ್ವಾನಗಳ ಆಶ್ರಯ ಕೇಂದ್ರ ಆರಂಭಿಸಿದರು. ಈ ಆಶ್ರಯ ತಾಣವು ಋತುವಿನ ಆಧಾರದ ಮೇಲೆ ಸುಮಾರು 70 ರಿಂದ 100 ನಾಯಿಗಳಿಗೆ ಆಶ್ರಯ ನೀಡುತ್ತದೆ. ಏಕೆಂದರೆ ಚಳಿಗಾಲದಲ್ಲಿ, ನಾಯಿಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತವೆ. ಆದ್ದರಿಂದ ಹೆಚ್ಚಿನ ನಾಯಿಗಳು ಇದೇ ಆಶ್ರಯ ಕೇಂದ್ರದಲ್ಲಿ ಹೆಚ್ಚು ಕಾಲ ಉಳಿಯುತ್ತವೆ.
ಕುರುಕ್ಷೇತ್ರ, ಅಂಬಾಲ, ಕೈಥಾಲ್ ಅಥವಾ ಕರ್ನಾಲ್‌ನಿಂದ ಗಾಯಗೊಂಡ ನಾಯಿಯ ಬಗ್ಗೆ ಮಾಹಿತಿ ಪಡೆದರೆ, ಪೂನಮ್ ಕಾರ್ಯ ಪ್ರವೃತ್ತಳಾಗುತ್ತಾರೆ. ವೈಯಕ್ತಿಕವಾಗಿ ಪ್ರಾಣಿಯನ್ನು ರಕ್ಷಿಸುತ್ತಾರೆ. ಸಣ್ಣಪುಟ್ಟ ಗಾಯಗಳಿಗೆ ಅವರೇ ಚಿಕಿತ್ಸೆ ನೀಡುತ್ತಾರೆ. ಗಂಭೀರವಾದ ಗಾಯಗಳು, ಉಳುಕು ಅಥವಾ ಅಪಘಾತ ಪ್ರಕರಣಗಳಿಂದ ನಾಯಿಗಳು ಗಾಯಗೊಂಡಿದ್ದರೆ.

Leave a Reply

Your email address will not be published. Required fields are marked *

error: Content is protected !!