ಉದಯವಾಹಿನಿ , ಪ್ಯಾರಿಸ್: ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಯಾವುದೇ ಕ್ರಮವು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಆರ್ಥಿಕ ಸಂಬಂಧವನ್ನು ಹಾಳು ಮಾಡುತ್ತದೆ ಎಂದು ಫ್ರಾನ್ಸ್ ಹಣಕಾಸು ಸಚಿವ ರೋಲ್ಯಾಂಡ್ ಲೆಸ್ಕೂರ್ ಅವರು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್‌ಗೆ ಎಚ್ಚರಿಕೆ ನೀಡಿದ್ದಾರೆ.
ಫೈನಾಲ್ಕಿಯಲ್ ಟೈಮ್ಸ್‌ನೊಂದಿಗೆ ಮಾತನಾಡಿದ ಅವರು, ‘ಗ್ರೀನ್‌ಲ್ಯಾಂಡ್ ಐರೋಪ್ಯ ಒಕ್ಕೂಟದಲ್ಲಿರುವ ಸಾರ್ವಭೌಮ ದೇಶದ ಭಾಗವಾಗಿದೆ. ಈ ವಿಷಯದಲ್ಲಿ ಗೊಂದಲ ಬೇಡ’ ಎಂದಿದ್ದಾರೆ.
ಗ್ರೀನ್‌ಲ್ಯಾಂಡ್ ಮೇಲೆ ಆಕ್ರಮಣ ಮಾಡಿದರೆ ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ‘ಅಲ್ಲಿಯ ತನಕ ನಾವು ಹೋಗುವುದಿಲ್ಲ. ಅದು ಸಂಭವಿಸಿದ್ದೆ ಆಗಿದ್ದಲ್ಲಿ ನಾವು ಸಂಪೂರ್ಣವಾಗಿ ಹೊಸ ಜಗತ್ತಿನಲ್ಲಿರುತ್ತೇವೆ. ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದ್ದಾರೆ.
