
ಉದಯವಾಹಿನಿ , ವಿಶ್ವದ ಪ್ರಮುಖ ಆರ್ಧಿಕತೆಗಳು ಆರ್ಥಿಕ ಹಿಂಜರಿತದ ನಡುವೆಯೂ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ..ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಆರ್ಥಿಕತೆಯು ಮತ್ತೊಮ್ಮೆ ತನ್ನ ಶಕ್ತಿಯನ್ನ ಸಾಬೀತು ಪಡಿಸಿದೆ..ಮಾತ್ರವಲ್ಲದೇ ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಯುದ್ಧದ ನಡೆಯೂ ಭಾರತದ ಮಾತ್ರ ತಮ್ಮ ಸ್ಥಾನವನ್ನ ಸೀಮಿತಗೊಳಸಿಕೊಂಡು ಏರುಗತಿಯಲ್ಲೇ ಸಾಗಿದೆ..ವಿಶ್ವದ ಪ್ರಮುಖ ಆರ್ಥಿಕತೆಗಳು ಆರ್ಥಿಕ ಹಿಂಜರಿತದ ನಡುವೆಯೂ ಭಾರತ ಮೇಲು ಗೈಸಾಧಿಸಿದೆ.
ಹೌದು.. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ 2025ರ ಡಿಸೆಂಬರ್‌ನಲ್ಲ ಭಾರತದ ಸರಕು ರಫ್ತು ಶೇಕಡಾ 1.87 ರಷ್ಟು ಹೆಚ್ಚಾಗಿದೆ.. 1.87 ರಷ್ಟು ಹೆಚ್ಚಾಗಿ ಇದು ಜಾಗತಿಕ ಮಾರುಕಟ್ಟೆಯಲ್ಲಿಮ ಬೇಡಿಕೆಗಳ ಏರಿತಳದ ಹೊರತಾಗಿಯೂ ಭಾರತೀಯ ಉತ್ಪನ್ನಗಳ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೆಳವಣಿಗೆ ಕಂಡಿದೆ..ಮಾತ್ರವಲ್ಲದೇ ಪ್ರಸಕ್ತ ಹಣಕಾಸು ವರ್ಷದ (2025-26) ಮೊದಲ ಒಂಬತ್ತು ತಿಂಗಳಲ್ಲಿ (ಏಪ್ರಿಲ್ ನಿಂದ ಡಿಸೆಂಬರ್) ಒಟ್ಟು ರಫ್ತು ಶೇಕಡಾ 2.44 ರಷ್ಟು ಹೆಚ್ಚಾಗಿ US $330.29 ಬಿಲಿಯನ್ ತಲುಪಿದೆ.
ಇತ್ತ ಜಾಗತಿಕ ಆರ್ಥಿಕತೆ ಕುಸಿತದ ನಡುವೆ ಭಾರತ ಉನ್ನತ ಮಟ್ಟ ತಲುಪಿದೆ..ವಾಣಿಜ್ಯ ಕಾರ್ಯಾದರ್ಶಿ ರಾಜೇಶ್ ಅಗರ್ವಾಲ್ ಪ್ರಕಾರ ರಫ್ತು ಹೆಚ್ಚಳದ ಜೊತೆಗೆ ದೇಶದ ಆಮದು ಕೂಡ ಹೆಚ್ಚಳವಾಗಿದೆ..ಅದರಂತೆ ಕಳೆದ ವರ್ಷ ಇದೇ ತಿಂಗಳಲ್ಲಿ ಹೋಲಿಸಿದರೆ 2025ರಲ್ಲಿ $63.55 ಶತಕೋಟಿಗೆ ಏರಿಕೆಯಾಗಿದೆ.ಡೋನಾಲ್ಡ್ ಟ್ರಂಪ್ ಅವರ ಸುಂಕ ಸಮರದ ನಡುವೆಯೂ ಅಮೆರಿಕಕ್ಕೆ ಮಾಡುವ ರಫ್ತಿನಲ್ಲಿ ಶೇಕಡಾ 9.75 ರಷ್ಟು ಏರಿಕೆ ಕಂಡಿದೆ. ಮಾತ್ರವಲ್ಲದೇ ಅಮೆರಿಕದಲ್ಲಿ ದಿನೇ ದಿನೇ ಭಾರತೀಯ ವಸ್ಸ್ತಗಳಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ.
ಇನ್ನೂ ಚೀನಾಕ್ಕೆ ಕಳುಸುವ ರಫ್ತಿನಲ್ಲೂ ಭಾರತ ಮೇಲೂಗೈ ಸಾಧಿಸಿದೆ.. ಐಫೋನ್ ರಫ್ತು ಕೂಡ ಹೆಚ್ಚಳವಾಗಿದೆ.. ಭಾರತ ಸುಮಾರು $79.03 ಬಿಲಿಯನ್ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿತು, ಅದರಲ್ಲಿ 2025ರಲ್ಲಿಯೇ ಅತಿ ಹೆಚ್ಚು ರಫ್ತು ಮಾಡಲಾಗಿದೆ ಅಷ್ಟು ಅಂದರೆ $30 ಬಿಲಿಯನ್ ಮೊತ್ತದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಲಾಗಿದೆ.ಸದ್ಯ ಜಾಗತಿಕ ಆರ್ಥಿಕ ಪರಿಸ್ಥಿತಿ ಕುಸಿತದ ನಡುವೆಯೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತವೇ ಏರುಗತಿಯಲ್ಲಿ ಸಾಗುತ್ತಿರೋದು ವಿಶೇಷವಾಗಿದೆ.
