ಉದಯವಾಹಿನಿ , 40ಕ್ಕೂ ಹೆಚ್ಚು ಬಾರಿ ಹಜ್‌ ಯಾತ್ರೆ ಕೈಗೊಂಡಿದ್ದಂತಹ ಸೌದಿ ಅರೇಬಿಯಾದ ದೀರ್ಘಾಯುಷಿ ನಾಸರ್‌ ಬಿನ್‌ ರದಾನ್‌ ಅಲ್‌ ರಶೀದ್‌ ಅಲ್‌ ವಡೈ ಅವರು 142ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ ನಗರದಲ್ಲಿ ರಶೀದ್‌ ಅಲ್‌ ವಡೈ ಕೊನೆಯುಸಿರೆಳೆದಿದ್ದಾರೆ. 142ನೇ ವಯಸ್ಸಿನಲ್ಲಿ ನಿಧನ ಹೊಂದಿರುವ ನಾಸರ್‌ ಬಿನ್‌ ರದಾನ್‌ ಅಲ್‌ ರಶೀದ್‌ ಅಲ್‌ ವಡೈ ಅವರನ್ನು ಸ್ವಯಂ ಘೋಷಿತ ದೀರ್ಘಾಯುಷಿ ಎಂದು ಹೇಳಲಾಗಿದೆ. ಇವರ ಅಂತ್ಯಕ್ರಿಯೆಯಲ್ಲಿ 7,000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ರಶೀದ್‌ ಅಲ್‌ ವಡೈ ಅವರ ಅಂತ್ಯಕ್ರಿಯೆಯ ಪ್ರಾರ್ಥನೆ ಧಹ್ರಾನ್‌ ಅಲ್‌ ಜನೌಬ್‌ನಲ್ಲಿ ನಡೆದವು. ಬಳಿಕ ಅವರನ್ನು ಅಲ್‌ ರಶೀದ್‌ ಗ್ರಾಮದಲ್ಲಿ ಸಮಾಧಿ ಮಾಡಲಾಯಿತು ಎಂದು ಹೇಳಲಾಗಿದೆ.

ಮಾಹಿತಿಗಳ ಪ್ರಕಾರ ರಶೀದ್‌ ಅಲ್‌ ವಡೈ ಅವರು ಸೌದಿ ಅರೇಬಿಯಾ ಏಕೀಕರಣಕ್ಕೂ ಮೊದಲೇ ಅಂದರೆ 1884 ಜನಿಸಿದ್ದರು. ಅವರ ಕುಟುಂಬದ ಮೂಲಗಳ ಪ್ರಕಾರ ಸೌದು ಅರೇಬಿಯಾದ ಪಿತಾಮಹ ರಾಜ ಅಬ್ದುಲ್‌ ಅಜೀಜ್‌ ಅವರಿಂದ ಇವತ್ತಿನ ರಾಜ ಸಲ್ಮಾನ್‌ ಅವರ ವರೆಗೆ ರಶೀದ್‌ ಅಲ್‌ ವಡೈ ಜನಿಸಿದ್ದರು. ಇವರು ಅನೇಕ ರಾಜರ ತಲೆಮಾರುಗಳನ್ನು ನೋಡಿದ್ದಾರೆ ಎನ್ನಲಾಗಿದೆ. ರಶೀದ್‌ ಅಲ್‌ ವಡೈ ಕೊನೆಯ ಬಾರಿಗೆ 110ನೇ ವಯಸ್ಸಿನಲ್ಲಿ ವಿವಾಹವಾಗಿದ್ದರು. ಬಳಿಕ ವೈವಾಹಿಕ ಜೀವನದಲ್ಲಿ ಇಳಿವಯಸ್ಸಿನಲ್ಲೂ ಹೆಣ್ಣು ಮಗುವನ್ನ ಪಡೆದಿದ್ದರು. ಇಷ್ಟೇ ಅಲ್ಲದೇ 40ಕ್ಕೂ ಹೆಚ್ಚು ಬಾರಿ ಹಜ್ ಯಾತ್ರೆ ಕೈಗೊಂಡಿದ್ದರು. 132 ಮಕ್ಕಳು ಹಾಗೂ ಹಲವಾರು ಮೊಮ್ಮಕಗಳನ್ನು ಅಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರು ಹೆಚ್ಚು ವರ್ಷ ಬದುಕಿದ್ದರು ಎನ್ನುವುದಕ್ಕೆ ಪ್ರಶ್ನೆಗಳು ಎದ್ದಿವೆ.

Leave a Reply

Your email address will not be published. Required fields are marked *

error: Content is protected !!