ಉದಯವಾಹಿನಿ , ಹರ್ಲೀನ್‌ ಡಿಯೋಲ್‌ ಸ್ಫೋಟಕ ಫಿಫ್ಟಿ ನೆರವಿನಿಂದ ಯುಪಿ ವಾರಿಯರ್ಸ್‌ ಮಹಿಳೆಯರ ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ 7 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಸತತ ಮೂರು ಪಂದ್ಯಗಳಲ್ಲಿ ಸೋತಿದ್ದ ವಾರಿಯರ್ಸ್‌ ತಂಡ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ.ಟಾಸ್‌ ಸೋತ ಮುಂಬೈ ಮೊದಲು ಬ್ಯಾಟಿಂಗ್‌ ಮಾಡಿ 5 ವಿಕೆಟ್‌ ನಷ್ಟಕ್ಕೆ 161 ರನ್‌ ಗಳಿಸಿತ್ತು. ಸ್ಪರ್ಧಾತ್ಮಕ ರನ್‌ ಗುರಿ ಬೆನ್ನಟ್ಟಿದ್ದ ಯುಪಿ ತಂಡ 18.1 ಓವರ್‌ಗಳಲ್ಲಿ 3 ವಿಕೆಟ್‌ಗೆ 162 ರನ್‌ ಗಳಿಸಿ ಗೆಲುವು ಸಾಧಿಸಿತು.
ವಾರಿಯರ್ಸ್‌ ಪರ ಡಿಯೋಲ್‌ 64 ರನ್‌ (39 ಎಸೆತ, 12 ಬೌಂಡರಿ), ಕ್ಲೋಯ್ ಟ್ರಯಾನ್ 11 ಎಸೆತಗಳಲ್ಲಿ ಸ್ಫೋಟಕ 27 ರನ್‌, ಮೆಗ್‌ ಲ್ಯಾನಿಂಗ್‌, ಫೋಬೆ ಲಿಚ್‌ಫೀಲ್ಡ್‌ ತಲಾ 25 ರನ್‌ ಹಾಗೂ ಕಿರನ್‌ ನವಗಿರೆ 10 ರನ್‌ ಗಳಿಸಿದ್ರು. ಇನ್ನೂ ಮುಂಬೈ ಪರ ನಾಟ್‌ ಸ್ಕಿವರ್‌ ಬ್ರಂಟ್‌ 65‌ ರನ್‌, ಅಮನ್‌ ಜೋತ್‌ ಕೌರ್‌ 78 ರನ್‌, ನಿಕೋಲಾ ಕ್ಯಾರಿ 32 ರಮ್‌, ಕಮಲಿನಿ 5 ರನ್‌ ಹಾಗೂ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ 16 ರನ್‌ ಗಳಿಸಿದ್ರು. ಸದ್ಯ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಆರ್‌ಸಿಬಿ ಅಗ್ರಸ್ಥಾನದಲ್ಲಿದ್ದರೆ, 4ರಲ್ಲಿ 2 ಪಂದ್ಯ ಗೆದ್ದಿರುವ ಮುಂಬೈ 4 ಅಂಕ ಪಡೆದು 2ನೇ ಸ್ಥಾನದಲ್ಲಿದೆ, ಇನ್ನೂ ಗುಜರಾತ್‌ ಜೈಂಟ್ಸ್‌ ಕೂಡ 4 ಅಂಕ ಪಡೆದು 3ನೇ ಸ್ಥಾನದಲ್ಲಿದ್ದರೆ, ತಲಾ 2 ಅಂಕ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಯುಪಿ ವಾರಿಯರ್ಸ್‌ ಕ್ರಮವಾಹಿ 3 ಮತ್ತು 4ನೇ ಸ್ಥಾನದಲ್ಲಿವೆ.

Leave a Reply

Your email address will not be published. Required fields are marked *

error: Content is protected !!