ಉದಯವಾಹಿನಿ, ದುಬೈ: ಇರಾನ್ನ ಕಟ್ಟರ್ವಾದಿ ಧರ್ಮಗುರು ಬಂಧಿತ ಪ್ರತಿಭಟನಾಕಾರರಿಗೆ ಮರಣದಂಡನೆ ವಿಧಿಸಬೇಕು ಎನ್ನುವ ಮೂಲಕ ಟ್ರಂಪ್ಗೆ ಬೆದರಿಕೆ ಹಾಕಿದ್ದಾರೆ. ಮತ್ತೊಂದೆಡೆ ಟೆಹ್ರಾನ್ನಲ್ಲಿ ಪ್ರತಿಭಟನೆಯ ಕಾವು ಕಡಿಮೆಯಾಗುತ್ತಿದೆ. ಆದರೆ ಯುದ್ಧದ ಭಯ ಹಾಗೆಯೇ ಮುಂದುವರೆದಿದೆ.
ಮರಣದಂಡನೆಯಿಂದ ಹಿಂದೆ ಸರಿದಿದ್ದಕ್ಕೆ ಧನ್ಯವಾದ ಎಂದ ಟ್ರಂಪ್; ಇನ್ನೊಂದು ಬೆಳವಣಿಗೆಯಲ್ಲಿ ಇರಾನ್ ಪ್ರತಿಭಟನಾಕಾರರ ವಿರುದ್ಧ ಮರಣದಂಡನೆ ಶಿಕ್ಷೆ ವಿಧಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಇರಾನ್ನ ಈ ಕ್ರಮಕ್ಕೆ ಟ್ರಂಪ್ ಧನ್ಯವಾದ ತಿಳಿಸಿದ್ದಾರೆ. 800 ಜನರನ್ನು ಗಲ್ಲಿಗೇರಿಸುವ ನಿರ್ಧಾರದಿಂದ ಇರಾನ್ ಹಿಂದೆ ಸರಿದಿದ್ದಕ್ಕೆ ನಾವು ಗೌರವಿಸುತ್ತೇವೆ ಎಂದು ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟ್ರೂಥ್ನಲ್ಲಿ ತಿಳಿಸಿದ್ದಾರೆ. 800 ಮಂದಿಯನ್ನ ಉಳಿಸಿದ್ದೇನೆ: ಈ ಕುರಿತು ವಾಷಿಂಗ್ಟನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಟ್ರಂಪ್, ಇರಾನ್ನಲ್ಲಿನ 800 ಜನರು ಗಲ್ಲಿಗೇರಿಸುವುದನ್ನು ತಪ್ಪಿಸಿದ್ದೇನೆ ಎಂದಿದ್ದಾರೆ.ಆದರೆ ಈ ಕುರಿತು ಇರಾನ್‌ನಲ್ಲಿ ಯಾರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂಬುದನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.
ಇರಾನ್ ಪ್ರತಿಭಟನೆ ಕುರಿತು ಮಾತನಾಡಿರುವ ಅಮೆರಿಕದ ಮೂಲದ ಮಾನವ ಹಕ್ಕು ಕಾರ್ಯಕರ್ತರು, ಇರಾನ್‌ನಲ್ಲಿ ಪ್ರತಿಭಟನೆ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆ 3,090 ಆಗಿದೆ. ಇದು 1979ರ ಕ್ರಾಂತಿಯನ್ನು ನೆನಪಿಸುತ್ತದೆ ಎಂದಿದ್ದಾರೆ. ಟ್ರಂಪ್, ನೇತನ್ಯಾಹು ವಿರುದ್ಧ ಗುಡುಗಿದ ಖತಾಮಿ; ಈ ನಡುವೆ ಇರಾನಿನ ಸರ್ಕಾರಿ ರೇಡಿಯೋದಲ್ಲಿ ಧರ್ಮೋಪದೇಶ ಮಾಡಿರುವ ಗಾರ್ಡಿಯನ್ ಕೌನ್ಸಿಲ್‌ನ ಸದಸ್ಯರಾಗಿರುವ ಅಹ್ಮದ್ ಖತಾಮಿ, ಪ್ರತಿಭಟನೆಯಲ್ಲಿನ ಸಶಸ್ತ್ರ ಕಪಟಿಗಳನ್ನು ಕೊಲ್ಲಬೇಕು ಎಂದಿದ್ದಾರೆ. ನೆತನ್ಯಾಹು ಮತ್ತು ಟ್ರಂಪ್ ವಿರುದ್ಧ ಕಠಿಣ ಸೇಡು ತೀರಿಸಿಕೊಳ್ಳಲು ಕಾಯಬೇಕು. ಅಮೆರಿಕನ್ನರು ಮತ್ತು ಝಿಯೋನಿಸ್ಟ್‌ಗಳು ಶಾಂತಿಯನ್ನು ನಿರೀಕ್ಷಿಸಬಾರದು ಎಂದಿದ್ದಾರೆ. ಇರಾನ್ ಅಧ್ಯಕ್ಷರಿಗೆ ಕರೆ ಮಾಡಿದ ಪುಟಿನ್: ಈ ಉದ್ವಿಗ್ನತೆಯ ಬೆಳವಣಿಗೆ ನಡುವೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಇಸ್ರೇಲ್‌ನ ನೆತನ್ಯಾಹು ಜತೆ ಮಾತುಕತೆ ನಡೆಸಿದ್ದಾರೆ.ಪ್ರತಿಭಟನೆಯಲ್ಲಿ ಇರಾನ್‌ನಲ್ಲಿ 350 ಮಸೀದಿಗಳು, 126 ಪ್ರಾರ್ಥನಾ ಮಂದಿರಗಳು ಮತ್ತು 20 ಇತರ ಪವಿತ್ರ ಸ್ಥಳಗಳು ಹಾನಿಗೊಳಗಾಗಿವೆ. 400 ಆಸ್ಪತ್ರೆಗಳು, 106 ಆಂಬ್ಯುಲೆನ್ಸ್‌ಗಳು, 71 ಅಗ್ನಿಶಾಮಕ ದಳದ ವಾಹನಗಳು ಮತ್ತು ಇನ್ನೂ 50 ತುರ್ತು ವಾಹನಗಳು ಹಾನಿಗೊಳಗಾಗಿವೆ ಎಂದು ಖತಾಮಿ ತಿಳಿಸಿದ್ದಾರೆ.
ಇರಾನ್‌ನಲ್ಲಿ ಪ್ರತಿಭಟನೆಗಳು ಹತ್ತಿಕ್ಕಲ್ಪಟ್ಟಂತೆ ಕಂಡುಬಂದರೂ, ಸಾವಿರಾರು ಇರಾನಿಯನ್ನರು ಮತ್ತು ಅವರ ಬೆಂಬಲಿಗರು ಇಸ್ಲಾಮಿಕ್ ಗಣರಾಜ್ಯದ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಯುರೋಪಿನಾದ್ಯಂತ ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ.
