ಉದಯವಾಹಿನಿ, ಶ್ರೀನಗರ: ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಕಾರು ಬಾಂಬ್ ಸ್ಪೋಟಕ್ಕೆ ಸಂಬಂಧಿಸಿ ಹೊಸ ಹೊಸ ಮಾಹಿತಿಗಳು ಬೆಳಕಿಗೆ ಬರುತ್ತಲೇ ಇದೆ. ಇದೀಗ ಈ ಪ್ರಕರಣಕ್ಕೆ ಆತ್ಮಹತ್ಯಾ ಬಾಂಬರ್ ಆಗಲು ಕಾಶ್ಮೀರದ ಯುವಕನೊಬ್ಬನನ್ನು ಸಂಚಿನ ಮಾಸ್ಟರ್ ಮೈಂಡ್ ಸಂಪರ್ಕಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ. ದೆಹಲಿ ಕಾರು ಬಾಂಬ್ ಸ್ಫೋಟ ಪ್ರಕರಣದ ಮಾಸ್ಟರ್‌ಮೈಂಡ್ ಡಾ. ಉಮರ್-ಉನ್ ನಬಿ ಎರಡನೇ ಆತ್ಮಹತ್ಯಾ ಬಾಂಬರ್‌ನನ್ನು ನೇಮಿಸಿಕೊಳ್ಳಲು ಕಾಶ್ಮೀರದ ನಿವಾಸಿಯೊಬ್ಬನನ್ನು ಸಂಪರ್ಕಿಸಿದ್ದಾನೆ. ಆದರೆ ಆತ ಸೇಬು ಸುಗ್ಗಿಯ ಸಮಯ.
ತನ್ನ ಕುಟುಂಬಕ್ಕೆ ಸಹಾಯ ಮಾಡುವ ಅಗತ್ಯವಿದೆ ಎಂದು ಹೇಳಿ ಭಯೋತ್ಪಾದಕ ಸಂಚಿನಿಂದ ಹಿಂದೆ ಸರಿದಿದ್ದಾನೆ ಎಂದು ತನಿಖಾಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ಕಳೆದ ನವೆಂಬರ್ 10ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಸಮೀಪದಲ್ಲಿ ಕಾರು ಬಾಂಬ್ ಸ್ಫೋಟಗೊಂಡು 12ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಸ್ಫೋಟಕ ತುಂಬಿದ ಕಾರನ್ನು ನಬಿ ಚಲಾಯಿಸುತ್ತಿದ್ದನು. ಆದರೆ ಇದಕ್ಕೆ ಆತ ಇನ್ನೋರ್ವ ಆತ್ಮಹತ್ಯಾ ಬಾಂಬರ್ ಅನ್ನು ನೇಮಕ ಮಾಡಲು ಯೋಜನೆ ಮಾಡಿಕೊಂಡಿದ್ದ ಎಂದು ಶ್ರೀನಗರ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.
ವಿಚಾರಣೆಯ ಸಮಯದಲ್ಲಿ ಉಮರ್ ನಬಿ ವೈದ್ಯನಿಂದ ಭಯೋತ್ಪಾದಕನಾದ ಬಗ್ಗೆ ಹಲವಾರು ಮಾಹಿತಿಗಳನ್ನು ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಶೋಪಿಯಾನ್ ನಿವಾಸಿ ಯಾಸಿರ್ ಅಹ್ಮದ್ ದಾರ್ ಎಂಬಾತನನ್ನು ಕೂಡ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.
ಉಮರ್ ನಬಿ ಆತನನ್ನು ಆತ್ಮಹತ್ಯಾ ಬಾಂಬರ್ ಆಗಿ ನೇಮಕ ಮಾಡಲು ಮುಂದಾಗಿದ್ದ. ಆದರೆ ಆತ ಸೇಬು ಸುಗ್ಗಿಯ ಕಾಲ ಮತ್ತು ಮನೆಯಲ್ಲಿ ದುರಸ್ತಿ ಕಾರ್ಯವಿದೆ ಎಂದು ಹೇಳಿ ಕೊನೆಯ ಕ್ಷಣದಲ್ಲಿ ಯೋಜನೆಯಿಂದ ಹಿಂದೆ ಸರಿದಿದ್ದನು.

Leave a Reply

Your email address will not be published. Required fields are marked *

error: Content is protected !!