ಉದಯವಾಹಿನಿ, ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಾಘ ಮೇಳಕ್ಕೆ ಭೇಟಿ ನೀಡುವ ಭಕ್ತರು ಮತ್ತು ಪ್ರವಾಸಿಗರು ಈಗ ಸಂಗಮದ ಅರೈಲ್ ಬದಿಯಲ್ಲಿರುವ ಹೊಸದಾಗಿ ಅಭಿವೃದ್ಧಿಪಡಿಸಲಾದ ‘ಆಗಮನ್’ ಟೆಂಟ್ ಸಿಟಿಯಲ್ಲಿ ಐಷಾರಾಮಿ ಮತ್ತು ಅತ್ಯುತ್ತಮ ಸೌಕರ್ಯಗಳ ಜೊತೆಗೆ ಆಧ್ಯಾತ್ಮಿಕತೆಯನ್ನು ಅನುಭವಿಸಬಹುದಾಗಿದೆ.
ಉತ್ತರ ಪ್ರದೇಶ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಭಿವೃದ್ಧಿಪಡಿಸಿದ ಈ ಪ್ರೀಮಿಯಂ ಟೆಂಟ್ ಕಾಲೋನಿ ಪಂಚತಾರಾ ಮಟ್ಟದ ಸೌಲಭ್ಯಗಳನ್ನು ಒದಗಿಸುತ್ತದೆ. ಫೋರ್ಟ್ ವ್ಯೂ ಕೆಫೆಟೇರಿಯಾದಲ್ಲಿ ಕುಳಿತು ಐತಿಹಾಸಿಕ ಕೋಟೆಯ ಸಂಗಮ ಮತ್ತು ಗಂಗಾ ನದಿ ದಡವನ್ನು ನೇರವಾಗಿ ವೀಕ್ಷಿಸಬಹುದು.
ತ್ರಿವೇಣಿಯ ಪವಿತ್ರ ಮರಳಿನ ಮೇಲೆ ನೆಲೆಗೊಂಡಿರುವ ‘ಆಗಮನ’ ಟೆಂಟ್ ಸಿಟಿ ಆಧುನಿಕ ವಸತಿ ಸೌಕರ್ಯವನ್ನು ಕಲ್ಪವಾಸದ ಆಧ್ಯಾತ್ಮಿಕ ಅನುಭವದೊಂದಿಗೆ (ಧಾರ್ಮಿಕ ಆಚರಣೆಯ ಅವಧಿ) ಮನಸ್ಸಿಗೆ ಮುದ ನೀಡುವಂತೆ ಸಂಯೋಜಿಸಲಾಗಿದೆ.ಅತ್ಯಾಧುನಿಕ ಟೆಂಟ್​​ಗಳು: ಈ ಕುರಿತು ಮಾತನಾಡಿರುವ ಪ್ರವಾಸೋದ್ಯಮ ನಿಗಮದ ಮುಖ್ಯ ಆಡಳಿತಾಧಿಕಾರಿ ಡಿ.ಪಿ. ಸಿಂಗ್, 2025ರ ಕುಂಭಮೇಳದಲ್ಲಿ ಲಭ್ಯವಿರುವ ಟೆಂಟ್‌ಗಳಂತೆಯೇ ಮಾಘ ಮೇಳಕ್ಕಾಗಿ ಮೂರು ವಿಭಾಗಗಳ ಟೆಂಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. ಈ ಟೆಂಟ್‌ಗಳಲ್ಲಿ 12 ಪ್ರೀಮಿಯಂ, 12 ಐಷಾರಾಮಿ ಮತ್ತು 30 ಡಿಲಕ್ಸ್ ಸೇರಿವೆ, ಇವುಗಳನ್ನು ಯುಪಿಎಸ್‌ಟಿಡಿಸಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ 7,500 ರೂ.ಗಳಿಂದ 15,000 ರೂ.ಗಳವರೆಗೆ ಬಾಡಿಗೆಗೆ ಬುಕ್ ಮಾಡಬಹುದು” ಎಂದು ಅವರು ಹೇಳಿದರು.

ಆಗಮನದ ಸಮಯದಲ್ಲಿ ಮೊಳಗಲಿವೆ ಗಂಟೆಗಳು: ಪ್ರವಾಸಿಗರು ಮತ್ತು ಭಕ್ತರಿಗೆ ವಿಶೇಷ ಅನುಭವವನ್ನು ನೀಡಲು ಮತ್ತು ಅವರ ಧಾರ್ಮಿಕ ಪ್ರಯಾಣವನ್ನು ಸ್ಮರಣೀಯವಾಗಿಸಲು, ಮುಖ್ಯ ದ್ವಾರದಲ್ಲಿ ಗಂಟೆಗಳನ್ನು ಕಟ್ಟಲಾಗಿದೆ ಎಂದು ಸಿಂಗ್ ವಿವರಿಸಿದರು. “ಭಕ್ತರು ಟೆಂಟ್​ ಒಳಗೆ ಪ್ರವೇಶಿಸಿದ ತಕ್ಷಣ, ಅವರನ್ನು ಮುಖ್ಯ ದ್ವಾರದಲ್ಲಿ ಗಂಟೆಗಳನ್ನು ಬಾರಿಸುವ ಮೂಲಕ ಸ್ವಾಗತಿಸಲಾಗುತ್ತದೆ” ಎಂದು ಅವರು ಹೇಳಿದರು.

 

Leave a Reply

Your email address will not be published. Required fields are marked *

error: Content is protected !!