ಉದಯವಾಹಿನಿ, ಹೈದರಾಬಾದ್: ಬಹುಭಾಷಾ ನಟಿ ಪೂಜಾ ಹೆಗ್ಡೆ ಸೌತ್ ಮಾತ್ರವಲ್ಲದೆ, ಬಾಲಿವುಡ್‌ನಲ್ಲೂ ಮಿಂಚಿದ್ದಾರೆ. ಬಹುತೇಕ ಎಲ್ಲಾ ಬಿಗ್ ಸ್ಟಾರ್ಸ್‌ಗಳ ಜತೆ ಪೂಜಾ ಕೆಲಸ ಮಾಡಿದ್ದಾರೆ.
ಬಹುಬೇಡಿಕೆಯ ನಟಿಯಾಗಿ ಪೂಜಾ ಹೆಗ್ಡೆ ಅವರ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಮಿಮ್ ಪೇಜ್‌ವೊಂದು ಪೂಜಾ ಹೆಗ್ಡೆ ಅವರ ಫೋಟೋ ಹಾಕಿಕೊಂಡು ಅವರು ಹೇಳಿರುವ ಮಾತೆನ್ನುವ ಫೋಟೋವೊಂದನ್ನು ಹಂಚಿಕೊಳ್ಳಲಾಗಿದೆ.
“ಸಿನಿಮಾ ಉದ್ಯಮದಲ್ಲಿ, ಕೆಲವೊಮ್ಮೆ ನಾವು ನಟರು ಸಹ ನಮ್ಮ ಅನುಮತಿ ಅಥವಾ ಒಪ್ಪಿಗೆಯಿಲ್ಲದೆ ನಮ್ಮ ಕ್ಯಾರವಾನ್‌ಗೆ ಪ್ರವೇಶಿಸುವ ಸಂದರ್ಭಗಳನ್ನು ಎದುರಿಸುತ್ತೇವೆ. ಕೆಲವು ವರ್ಷಗಳ ಹಿಂದೆ, ದೊಡ್ಡ ಪ್ಯಾನ್ ಇಂಡಿಯನ್ ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ನಾನು ಅಂತಹ ಘಟನೆಯನ್ನು ಎದುರಿಸಿದೆ. ನಾನು ಅವನಿಗೆ ಕಪಾಳಮೋಕ್ಷ ಮಾಡಿದೆ ಮತ್ತು ಅಂದಿನಿಂದ, ಅವನು ನನ್ನೊಂದಿಗೆ ಮತ್ತೆ ಕೆಲಸ ಮಾಡಲು ಬಯಸಲಿಲ್ಲ.’ ಎಂದು ಪೂಜಾ ಹೆಗ್ಡೆ ಹೇಳಿರುವುದಾಗಿ ಮಿಮ್ ಪೇಜ್‌ನಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ.
ಆಗುತ್ತಿದ್ದಂತೆ ಟಾಲಿವುಡ್ ಟಾಪ್ ಸ್ಟಾರ್‌ಗಳೊಂದಿಗೆ ಇದನ್ನು ಲಿಂಕ್ ಮಾಡಲಾಗುತ್ತಿದೆ. ‘ ಸಾಕ್ಷಿ’, ‘ಫಿಲ್ಮಬೀಟ್’ ಮತ್ತು ‘ತೆಲುಗು360 ನಂತಹ ಸೈಟ್‌ಗಳು ಪೂಜಾ ಹೆಗ್ಡೆ ಅವರು ಈ ಮಾತನ್ನು ಹೇಳಿರುವುದು ಇತ್ತೀಚೆಗಿನ ಸಂದರ್ಶನದಲ್ಲಿ ಎಂದು ವರದಿ ಮಾಡಿವೆ. ಆದರೆ ಅಧಿಕೃತವಾಗಿ ಸಂದರ್ಶನ ತುಣುಕು ಇದುವರೆಗೆ ಸಿಕ್ಕಿಲ್ಲವೆಂದು ಸಿಯಾಸತ್.ಕಾಂ’ ವರದಿ ಮಾಡಿದೆ.
ಪೂಜಾ ಹೆಗ್ಡೆ ಅವರ ಹೇಳಿಕೆ ಎನ್ನಲಾಗುತ್ತಿರುವ ಪೋಸ್ಟ್ ವೈರಲ್ ಆದ ಬಳಿಕ ಪ್ರಭಾಸ್ ಅವರ ಹೆಸರು ಇದಕ್ಕೆ ಲಿಂಕ್ ಮಾಡಲಾಗುತ್ತಿದೆ. ಈ ಘಟನೆ 2021ರಲ್ಲಿ ‘ರಾಧೆ ಶ್ಯಾಮ್’ ವೇಳೆ ಆಗಿರುವುದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
‘ರಾಧೆ ಶ್ಯಾಮ್’ ಶೂಟಿಂಗ್ ವೇಳೆ ಟಾಪ್ ಹೀರೋ ಒಬ್ಬರು ನಾಯಕಿಯ ಕ್ಯಾರವಾನ್‌ಗೆ ಅನುಮತಿ ಇಲ್ಲದೆ ಪ್ರವೇಶ ಮಾಡಿದ್ದರು ಎಂದು ವರದಿಗಳಾಗಿತ್ತು. ಆ ಸಂದರ್ಭದಲ್ಲಿ ಅದು ಪ್ರಭಾಸ್ ಆಗಿರಬಹುದೆಂದು ಪರೋಕ್ಷವಾಗಿ ಕೆಲ ಮಾಧ್ಯಮಗಳು ವರದಿ ಮಾಡಿದ್ದವು.
ಪೂಜಾ ಹೆಗ್ಡೆ ಪ್ರಭಾಸ್ ನಡುವಿನ ಸ್ನೇಹ ‘ರಾಧೆ ಶ್ಯಾಮ್’ ಬಳಿಕ ಅಷ್ಟಾಗಿ ಚೆನ್ನಾಗಿಲ್ಲವೆನ್ನುವ ಮಾತು ಕೇಳಿ ಬಂದಿದ್ದು, ಈಗ ಅದನ್ನೇ ಇಟ್ಕಂಡು ಈ ವಿಚಾರಕ್ಕೆ ಕನೆಕ್ಟ್ ಮಾಡಲಾಗುತ್ತಿದೆ.
