ಉದಯವಾಹಿನಿ, : ನಟ ಕೋಮಲ್ ತೆನಾಲಿ ಡಿಎ ಎಲ್‌ಎಲ್‌ಬಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಕೋಮಲ್. ಸದ್ಯ ಬಿಡುಗಡೆ ಆಗಿರುವ ಪೋಸ್ಟರ್ ನಲ್ಲಿಯೂ ಕೋಮಲ್ ಲಾಯರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತೆನಾಲಿ ಡಿಎ ಎಲ್‌ಎಲ್‌ಬಿ ಸಿನಿಮಾವನ್ನು ಸಿದ್ದುವ್ ಸಿದ್ದು ನಿರ್ದೇಶನ ಮಾಡುತ್ತಿದ್ದಾರೆ.
ಈ ಹಿಂದೆ ವಿಜಯ ರಾಘವೇಂದ್ರ ನಟನೆಯ ಮರೀಚಿ ಸಿನಿಮಾವನ್ನ ಸಿದ್ದುವ್ ಸಿದ್ದು ನಿರ್ದೇಶನ ಮಾಡಿದ್ದರು. ಸದ್ಯ ಪೋಸ್ಟರ್ ಬಿಡುಗಡೆ ಮಾಡಿರೋ ಸಿನಿಮಾ ತಂಡ ಮೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ಲಾಯರ್ ಆಗಿ ಅಭಿನಯ ಮಾಡುತ್ತಿರೋ ಕೋಮಲ್ ತಮ್ಮ ನಿಜ ಜೀವನದಲ್ಲಿಯೂ ಎಲ್ ಎಲ್ ಬಿ ಓದಿದ್ದಾರೆ. ಅನೇಕ ವರ್ಷಗಳ ಬಳಿಕ ಈಗ ತೆರೆ ಮೇಲೆ ಲಾಯರ್‌ಆಗಿ ಮಿಂಚಲಿದ್ದಾರೆ. ಚಿತ್ರಕ್ಕೆ ಸಿದ್ದುವ್ ಸಿದ್ದು, ಸಂತೋಷ್ ಮಾಯಪ್ಪ, ಪ್ರದೀಪ್ ಕುಮಾರ್ ಮಹಾಲಿಂಗಯ್ಯ, ರೇಣುಕಾ ಪ್ರಸಾದ್ ಬಂಡವಾಳ ಹಾಕಿದ್ದಾರೆ. ರಿತ್ವಿಕ್ ಮುರಳಿಧರನ್ ಸಂಗೀತಾ ನಿರ್ದೇಶನ ಮಾಡುತ್ತಿದ್ದು ಉದಯ್ ಲೀಲಾ ಛಾಯಾಗ್ರಹಣವಿದೆ.
