ಉದಯವಾಹಿನಿ, : ಒಂದು ಕಾಲದಲ್ಲಿ ಹಿಂದಿ ಚಿತ್ರರಂಗವನ್ನು ಆಳಿದ ನಟಿ ಆಶಾ ಪರೇಖ್ ಅವರು ಇಂದಿಗೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. 83ನೇ ವಯಸ್ಸಿನಲ್ಲಿಯೂ ಒಂಟಿಯಾಗಿ ಜೀವನ ನಡೆಸುತ್ತಿರುವ ಆಶಾ ಪರೇಖ್, ತಮ್ಮ ಮದುವೆ ಬಗ್ಗೆ ಇರುವ ನಿರ್ಧಾರದ ಹಿಂದಿನ ಕಾರಣವನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಶಾ ಪರೇಖ್,
“ಮದುವೆ ಅಂದ್ರೆ ಮಳೆಬಿಲ್ಲು, ಚಿಟ್ಟೆಗಳಂತೆ ಸುಂದರವಾಗಿರುತ್ತದೆ ಅನ್ನೋ ಭ್ರಮೆ ನನಗಿರಲಿಲ್ಲ. ಮದುವೆಯಾದ ಮೇಲೆ ಕೆಲವೊಮ್ಮೆ ಸಂಗಾತಿಯ ಆಸೆಗಳಿಗೆ ತಕ್ಕಂತೆ ಬದುಕಬೇಕಾಗುತ್ತದೆ. ಅದು ಎರಡೂ ಕಡೆ ಇರಬೇಕು. ನಾನು ಮದುವೆಯಾಗದಿದ್ದಕ್ಕೆ ಯಾವುದೇ ವಿಷಾದವಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, “ನನ್ನ ತಾಯಿ ಹೇಳುತ್ತಿದ್ದಂತೆ, ನಾನು ಹಲವಾರು ಹುಡುಗರನ್ನು ಭೇಟಿಯಾಗಿದ್ದೇನೆ. ಆದರೆ ಮದುವೆ ಆಗೋಷ್ಟು ಒಳ್ಳೆಯ ಅನುಭವ ನನಗೆ ಸಿಗಲಿಲ್ಲ. ನಾನು ಭೇಟಿಯಾದ ಹೆಚ್ಚಿನವರು ಸಿದ್ಧರಾಗಲು ನನ್ನಿಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರು. ತಮ್ಮನ್ನು ತಾವು ಪ್ರೀತಿಸುವ ರೀತಿ ನನಗೆ ಇಷ್ಟವಾಗಲಿಲ್ಲ. ಇದು ವಿಚಿತ್ರವಾಗಿ ಕೇಳಿಸಬಹುದು, ಆದರೆ ಅದು ನನ್ನ ಮನಸ್ಸಿಗೆ ಒಪ್ಪಲಿಲ್ಲ” ಎಂದಿದ್ದಾರೆ.
