ಉದಯವಾಹಿನಿ, : ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಹಿರಿಯ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರು ಚುಟುಕು ವಿಶ್ವಕಪ್‌ ಟೂರ್ನಿಯ ಆಸ್ಟ್ರೇಲಿಯಾ ತಂಡದ ಆರಂಭಿಕ ಎರಡು ಪಂದ್ಯಗಳಿಂದ ಪ್ಯಾಟ್‌ ಕಮಿನ್ಸ್‌ ಹೊರ ನಡೆದಿದ್ದಾರೆ. ಪ್ಯಾಟ್ ಕಮಿನ್ಸ್ ಸೊಂಟದ ಮೂಳೆ ಒತ್ತಡದ ಗಾಯದಿಂದ ಬಳಲುತ್ತಿದ್ದಾರೆ. ಇದರ ಪರಿಣಾಮ ಆಷಸ್ ಸರಣಿಯ ಸಮಯದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳಿಗೆ ಹೊರಗುಳಿಯಬೇಕಾಯಿತು.
ಪ್ಯಾಟ್‌ ಕಮಿನ್ಸ್ ವಿಶ್ವಕಪ್‌ ಟೂರ್ನಿಗೆ ಫಿಟ್ ಆಗುತ್ತಾರೆ ಎಂಬ ಭರವಸೆಯ ಹೊರತಾಗಿಯೂ, ಆಸ್ಟ್ರೇಲಿಯಾದ ಆಯ್ಕೆ ಸಮಿತಿಯ ಮುಖ್ಯಸ್ಥ ಜಾರ್ಜ್ ಬೈಲಿ, ವಿಶ್ವಕಪ್‌ನ ಆರಂಭಿಕ ಹಂತದ ನಂತರವೇ ಪ್ರಮುಖ ಬೌಲರ್ ಸಿದ್ಧರಾಗುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರಿಂದಾಗಿ ವಿಶ್ವಕಪ್‌ ಟೂರ್ನಿಯ ಆರಂಭದಲ್ಲಿ ಆಸ್ಟ್ರೇಲಿಯಾ ತನ್ನ ಪ್ರಮುಖ ಆಟಗಾರರಲ್ಲಿ ಒಬ್ಬರನ್ನೂ ಕಳೆದುಕೊಂಡಿದೆ. ಅವರು ಬಹುಶಃ ಟೂರ್ನಿಯ ಸ್ವಲ್ಪ ಸಮಯದ ನಂತರ, ಮೂರು ಅಥವಾ ನಾಲ್ಕನೇ ಪಂದ್ಯದ ಆಸುಪಾಸಿನಲ್ಲಿ ಆ ವಿಶ್ವಕಪ್ ಟೂರ್ನಿಯ ತಂಡವನ್ನು ಸೇರುತ್ತಾರೆ,” ಎಂದು ಆಸ್ಟ್ರೇಲಿಯಾ ಹೆಡ್‌ ಕೋಚ್‌ ಜಾರ್ಜ್‌ ಬೈಲಿ ಭರವಸೆಯನ್ನು ವ್ಯಕ್ತಪಡಿಸಿದರು.

ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಪ್ಯಾಟ್‌ ಕಮಿನ್ಸ್‌ ಕೈ ಬಿಡಲಾಗಿದೆ. ಈ ಸರಣಿಯ ಮೂರು ಪಂದ್ಯಗಳು ಕ್ರಮವಾಗಿ 29 ರಿಂದ 31ರವರೆಗೆ ನಡೆಯಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ ತಂಡ, ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಲಿದೆ. ಫೆಬ್ರವರಿ 11 ರಂದು ಐರ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಆರಂಭಿಕ ಪಂದ್ಯವನ್ನು ಆಡಲಿದೆ.

Leave a Reply

Your email address will not be published. Required fields are marked *

error: Content is protected !!