ಉದಯವಾಹಿನಿ ದೇವರಹಿಪ್ಪರಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆರ್ಯಭಟ ಕರಿಯರ್ ಅಕಾಡೆಮಿ (ರಿ) ವಿಜಯಪುರ. ಕಾಲೇಜಿನ ಪ್ರೆಸ್ ಮೆಂಟ್ ಸೆಲ್ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಬಗ್ಗೆ ವಿದ್ಯಾರ್ಥಿಗಳಿಗೆ ಒಂದು ದಿನದ ಉಚಿತ ಕಾರ್ಯಗಾರವನ್ನು ಸೋಮವಾರದಂದು ಕಾಲೇಜಿನ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು.ಕಾರ್ಯಕ್ರಮವನ್ನು ಎಸ್ ವ್ಹಿ ನಾಟಿಕರ್ ಪಿಎಸ್ಐ ವಿಜಯಪುರ ಇವರು ಉದ್ಘಾಟಿಸಿ ಮಾತನಾಡಿದ ಅವರು,ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡದೆ ಸರಿಯಾದ ತರಬೇತಿಯೊಂದಿಗೆ ಅಧ್ಯಯನ ಮಾಡಿದರೆ ಜೀವನದಲ್ಲಿ ಉನ್ನತವಾದ ಸ್ಥಾನವನ್ನು ಅಲಂಕರಿಸಬಹುದು ಎಂದು ಹೇಳಿದರು.
ವಿಜಯಪುರದ ಆರ್ಯಭಟ ಕರಿಯರ್ ಅಕಾಡೆಮಿಯ ನಿರ್ದೇಶಕರಾದ ಶ್ರೀಶೈಲ ತೇಲಿ ಹಾಗೂ ಮುತ್ತುರಾಜ ರೋಡಗಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರುವ ವಿಜ್ಞಾನ ವಿಷಯದ ಕುರಿತು ಹಾಗೂ ಮೆಂಟಲಿಬಿಲಿಟಿ ವಿಷಯದ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ ಎ ಎಸ್ ಹೆಗಡೆ ಅವರು ವಹಿಸಿಕೊಂಡಿದ್ದರು.
ಇದೇ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕರಾದ ಪ್ರೊ ಶಿವಪುತ್ರ ಚಲವಾದಿ, ಪ್ರೆಸ್ ಮೆಂಟ್ ಸೆಲ್ ವಿಭಾಗದ ಸಂಚಾಲಕರಾದ ಪ್ರೊ ಪ್ರೇಮಕುಮಾರಿ.ಸಿ, ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕು. ರೇಣುಕಾ ಕೂಟಗಿ ಪ್ರಾರ್ಥಿಸಿದರು.ಕು. ನೂರ್ಜಾನ್ ವಂದಿಸಿದರು,ಕು. ನಿಕಿತಾ ಅವರಿಂದ ಕಾರ್ಯಕ್ರಮದಲ್ಲಿ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!