ಉದಯವಾಹಿನಿ, ಚೆನ್ನೈ: ರಾಜ್ಯಪಾಲರೇ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಘಟನೆ ತಮಿಳುನಾಡಿನ ವಿಧಾನ ಸಭೆಯಲ್ಲಿಂದು ನಡೆದಿದೆ. ತನಗೆ ಮಾತನಾಡೋಕೆ ಅವಕಾಶ ಕೊಟ್ಟಿಲ್ಲ ಅಂತ ರಾಜ್ಯಪಾಲ ಆರ್.ಎನ್.ರವಿ , ರಾಷ್ಟ್ರಗೀತೆ ನುಡಿಸುತ್ತಿದ್ದಾಗಲೇ ವಿಧಾನಸಭೆಯಿಂದ ಹೊರ ನಡೆದಿದ್ದಾರೆ.
ಹೌದು. ವಿಧಾನಸಭೆ ಅಧಿವೇಶನದ ಆರಂಭದಲ್ಲಿ ತಮಿಳುನಾಡಿನ ನಾಡಗೀತೆಯ ಜೊತೆಗೆ ರಾಷ್ಟ್ರಗೀತೆಯನ್ನು ನುಡಿಸಬೇಕೆಂದು ಹೇಳಲಾಯಿತು. ಇದರಿಂದ ಕೋಪಗೊಂಡ ರಾಜ್ಯಪಾಲರು ವಿಧಾನಸಭೆಯಿಂದ ಹೊರನಡೆದಿದ್ದಾರೆ. ಈ ಮೂಲಕ ಮೂಲಭೂತ ಸಾಂವಿಧಾನ ಕರ್ತವ್ಯವನ್ನ ನಿರ್ಲಕ್ಷಿಸಿದ್ದಾರೆ. ಪ್ರೋಟೋ ಕಾಲ್ ಹೇಳೋದೇನು?
ಶಿಷ್ಟಾಚಾರದ ಪ್ರಕಾರ, ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯಪಾಲರು ಮೊದಲು ಮಾತನಾಡಬೇಕಿತ್ತು. ಆದ್ರೆ ಮೊದಲು ನಾಡಗೀತೆಯನ್ನ ನುಡಿಸಲಾಯಿತು, ಇದು ಭಾರೀ ಗೊಂದಲ ಏರ್ಪಡಿಸಿತು. ಅಲ್ಲದೇ ನಾಡಗೀತೆ ಬಳಿಕ ರಾಷ್ಟ್ರಗೀತೆ ನುಡಿಸುವಂತೆಯೂ ಹೇಳಲಾಯಿತು. ಹಾಗಾಗಿ ರಾಜ್ಯಪಾಲರು ಸಂಕ್ಷಿಪ್ತ ಶುಭಾಶಯ ಕೋರಿ ಸದನದಿಂದ ಹೊರ ನಡೆದರು. ಇದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
