ಉದಯವಾಹಿನಿ, ತಿರುವನಂತಪುರ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಬಳ್ಳಾರಿ, ತಮಿಳುನಾಡು, ಕೇರಳ ಸೇರಿದಂತೆ 21 ಕಡೆ ಇಡಿ ದಾಳಿ ನಡೆಸಿದೆ. ಈ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಇದೀಗ ಇಡಿ ಎಂಟ್ರಿಕೊಟ್ಟಿದೆ. ಬೆಂಗಳೂರು, ಬಳ್ಳಾರಿ ಹಾಗೂ ತಿರುವನಂತಪುರಂದ ಹಲವೆಡೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದೆ. ಚಿನ್ನ ಕಳ್ಳತನದ ಆರೋಪದಲ್ಲಿ ಜೈಲುಪಾಲಾಗಿರುವ ಗೋವರ್ಧನ್ ಒಡೆತನದ ಬಳ್ಳಾರಿಯ ರೊದ್ದಂ ಜ್ಯುವೆಲರಿ ಶಾಪ್ ಹಾಗೂ ಮನೆ, ಶಬರಿಮಲೆಯ ತಂತ್ರಿಯಾಗಿದ್ದ ಬೆಂಗಳೂರಿನ ಶ್ರೀರಾಮಪುರ ನಿವಾಸಿ ಪೊನ್ನಿ ಉನ್ನಿಕೃಷ್ಣನ್, ಸ್ಟಾರ್ಟ್ ಕ್ರಿಯೇಷನ್, ವಾಸು ನಿವಾಸ ಸೇರಿದಂತೆ ತಮಿಳುನಾಡು, ಕೇರಳ ಸೇರಿದಂತೆ 21 ಕಡೆ ಇಡಿ ದಾಳಿ ನಡೆಸಿದೆ. ಈ ಹಿಂದೆ ಎಸ್‌ಐಟಿ ಅಧಿಕಾರಿಗಳು ಕೂಡ ದಾಳಿ ನಡೆಸಿದ್ದರು.
ಚಿನ್ನ ಕಳ್ಳತನ ಕೇಸಲ್ಲಿ ಅಕ್ರಮ ಹಣದ ವರ್ಗಾವಣೆ ಕಂಡುಬಂದ ಹಿನ್ನೆಲೆ ಇಸಿಐಆರ್ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು (ಜ.20) ದಾಳಿ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸ್ತಿದೆ. ಪೊನ್ನಿ ಉನ್ನಿಕೃಷ್ಣನ್ ಹಾಗು ಗೋವರ್ಧನ್ ಸೇರಿಕೊಂಡು ಕದ್ದ ಚಿನ್ನದ ಹಣವನ್ನ ಅಕ್ರಮವಾಗಿ ಇತರರಿಗೆ ವರ್ಗಾವಣೆ ಸಹ ಮಾಡಿದ್ದಾರೆ.
