ಉದಯವಾಹಿನಿ, ಶ್ರೀನಗರ: ಜಮ್ಮು-ಕಾಶ್ಮೀರದ ಛತ್ರೂ ಪ್ರದೇಶದಲ್ಲಿ 12,000 ಅಡಿ ಎತ್ತರದಲ್ಲಿದ್ದ ಜೈಶ್-ಎ-ಮೊಹಮ್ಮದ್ ಉಗ್ರರ ಭೂಗತ ಅಡಗು ತಾಣವೊಂದು ಪತ್ತೆಯಾಗಿದೆ.
ಜೈಶ್ ಉಗ್ರರ ಹೆಡೆಮುರಿ ಕಟ್ಟುವ ಉದ್ದೇಶದಿಂದ ಆಪರೇಷನ್ ತ್ರಾಶಿ-I ಕಾರ್ಯಾಚರಣೆಯ ಭಾಗವಾಗಿ ಭದ್ರತಾ ಪಡೆಗಳು ಛತ್ರೂ ಪ್ರದೇಶದ ಕಿಶ್ತ್ವಾರ್‌ನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದವು. ಈ ವೇಳೆ 12,000 ಅಡಿ ಎತ್ತರದಲ್ಲಿದ್ದ ಅಡಗು ತಾಣ ಪತ್ತೆಯಾಗಿದೆ. ಅನೇಕ ಕಡೆ ಎಂಟ್ರಿ, ಎಕ್ಸಿಟ್‌ಗಳನ್ನ ಹೊಂದಿರುವ ಈ ಅಡಗು ತಾಣದಲ್ಲಿ ಏಕಕಾಲಕ್ಕೆ ನಾಲ್ವರು ಅಡಗಿಕೊಳ್ಳುವ ಮತ್ತು ತಪ್ಪಿಸಿಕೊಳ್ಳುವಷ್ಟು ದೊಡ್ಡದಿದೆ. ಹಲವು ದಿನಗಳಿಂದ ಇಲ್ಲಿ ಉಗ್ರರು ಸಕ್ರೀಯರಾಗಿದ್ದರು ಅನ್ನೋದಕ್ಕೆ ಸಾಕ್ಷಿಗಳು ಸಿಕ್ಕಿವೆ. ಉಗ್ರರು ಅಗತ್ಯಕ್ಕಾಗಿ ಸಂಗ್ರಹಿಸಿದ್ದ ಆಹಾರ, ಅಡುಗೆ ಅನಿಲ, ದೇಸಿ ತುಪ್ಪ, ಧಾನ್ಯಗಳು ಮತ್ತು ಕಂಬಳಿಯಂತಹ ಅಗತ್ಯ ವಸ್ತುಗಳು ಪತ್ತೆಯಾಗಿವೆ.
