ಉದಯವಾಹಿನಿ, ಕೋಟಾ, ರಾಜಸ್ಥಾನ: ದೇಶದ ಅತಿದೊಡ್ಡ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ ಮೇನ್ಸ್ 2026) ಮೊದಲ ಅವಧಿ ಇಂದಿನಿಂದ ಆರಂಭವಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ದೇಶಾದ್ಯಂತ ಮತ್ತು ವಿದೇಶಗಳಲ್ಲಿ 300 ಕ್ಕೂ ಹೆಚ್ಚು ನಗರಗಳಲ್ಲಿ ಪರೀಕ್ಷೆಯನ್ನು ನಡೆಸುತ್ತಿದೆ. ಸುಮಾರು 1.3 ಮಿಲಿಯನ್ಗಿಂತಲೂ ಅಧಿಕ ಅಭ್ಯರ್ಥಿಗಳು ಜೆಇಇ ಮುಖ್ಯ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ.ಬೆಳಗ್ಗೆ 9 ಗಂಟೆಯ ಪರೀಕ್ಷೆಗೆ ಬೆಳಗ್ಗೆ 8:30 ರವರೆಗೆ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ವ್ಯಾಪಕ ಭದ್ರತಾ ಕ್ರಮಗಳ ನಂತರ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು. ವಿದ್ಯಾರ್ಥಿಗಳನ್ನು ಲೋಹ ಶೋಧಕಗಳೊಂದಿಗೆ ತಪಾಸಣೆ ಮಾಡಲಾಯಿತು ಮತ್ತು ಬಯೋಮೆಟ್ರಿಕ್ ಪರಿಶೀಲನೆಗೆ ಒಳಪಡಿಸಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಯಿತು.
ಪರೀಕ್ಷಾ ಕೇಂದ್ರಗಳು ಹಾಗೂ ಸುತ್ತ ಮುತ್ತ ಸಿಸಿಟಿವಿ ಕಣ್ಗಾವಲು: ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 7:30 ರಿಂದಲೇ ಉದ್ದನೆಯ ಸರತಿ ಸಾಲುಗಳು ಕಂಡು ಬಂದವು. ಪರೀಕ್ಷೆಯ ಹಿನ್ನೆಲೆಯಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದೆ. ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ವಿಧಾನದಲ್ಲಿ ನಡೆಸಲಾಗುವ ಈ ಪರೀಕ್ಷೆಯು ಸಿಸಿಟಿವಿ ಕ್ಯಾಮೆರಾಗಳು ಮತ್ತು ಜಾಮರ್‌ಗಳನ್ನು ಸಹ ಬಳಸಲಾಗುತ್ತಿದೆ. ಈ ಸಿಸಿಟಿವಿ ಕ್ಯಾಮೆರಾಗಳನ್ನು ನೇರವಾಗಿ ಮೇಲ್ವಿಚಾರಣಾ ಕೊಠಡಿಯಲ್ಲಿ ಸ್ಥಾಪಿಸಲಾಗಿದ್ದು, ಅವುಗಳ ಮೂಲಕವೇ ಪರೀಕ್ಷಾ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಸಂಪೂರ್ಣ ಪೊಲೀಸ್ ತಪಾಸಣೆ: ಪರೀಕ್ಷಾ ಮೇಲ್ವಿಚಾರಣೆ ಮಾಡಲು ಬೆಳಗ್ಗೆಯಿಂದಲೇ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದಲ್ಲದೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಈ ಹಿಂದೆ ನೀಡಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದ ನಂತ ಬಾರ್ ಕೋಡ್ಗಳನ್ನು ಬಳಸಿ ಪ್ರಯೋಗಾಲಯಗಳನ್ನು ನೀಡಲಾಯಿತು. ಪರೀಕ್ಷೆಯು ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಯಿತು ಮತ್ತು ಮಧ್ಯಾಹ್ನ 12 ಗಂಟೆಯವರೆಗೆ ನಡೆಯಿತು.
ಈ ಎಲ್ಲ ಪರಿಕರ ಹಾಗೂ ವಸ್ತು, ವಸ್ತ್ರಗಳಿಗೆ ನಿರ್ಬಂಧ – ಕಿವಿಯೋಲೆ, ಪವಿತ್ರದಾರಗಳನ್ನು ತೆಗೆಸಿ ಪರೀಕ್ಷೆಗೆ ಅವಕಾಶ :- ಹಲವಾರು ವಿದ್ಯಾರ್ಥಿಗಳು ತಮ್ಮ ಕುತ್ತಿಗೆಗೆ ದಾರ ಅಥವಾ ಕೈಗೆ ಪವಿತ್ರ ದಾರವನ್ನು ಕಟ್ಟಿಕೊಂಡಿದ್ದರು. ಅವರನ್ನು ಒಳಗೆ ಬಿಡುವ ಮೊದಲು ಅವುಗಳನ್ನು ತೆಗೆದುಹಾಕಲಾಯಿತು ಅಥವಾ ಕತ್ತರಿಸಲಾಯಿತು. ಕೆಲವು ವಿದ್ಯಾರ್ಥಿನಿಯರು ತಮ್ಮ ಕಿವಿಯೋಲೆಗಳು ಮತ್ತು ಮೂಗಿನ ಪಿನ್‌ಗಳನ್ನು ತೆಗೆಯದೇ ಬಂದಿದ್ದರು. ಅವುಗಳನ್ನು ಸಹ ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮುನ್ನವೇ ತೆಗೆದಿರಿಸಲಾಯಿತು.
