
ಉದಯವಾಹಿನಿ ನಾಗಮಂಗಲ: ರಾಜ್ಯದ ವಿಶ್ವಕರ್ಮ ಸಮುದಾಯವು ತೀರ ಹಿಂದುಳಿದಿದ್ದು ಇಂತಹ ಸಂದರ್ಭದಲ್ಲಿ ನಮ್ಮಗಳಿಗೆ ಸಾಮಾಜಿಕ ನ್ಯಾಯ ಬದ್ಧತೆ ಅಗತ್ಯವಿದ್ದು ತಾವುಗಳೆಲ್ಲರೂ ಸಮುದಾಯಕ್ಕೆ ಸಹಕಾರ ನೀಡುವಂತೆ ವಿಧಾನ ಪರಿಷತ್ ಸದಸ್ಯರಾದ ಕೆಪಿ ನಂಜುಂಡಿ ತಿಳಿಸಿದರು.ಅವರು ನಾಗಮಂಗಲ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಕಚೇರಿಗೆ ಆಗಮಿಸಿ, ಸಮುದಾಯದ ಬಾಂಧವರನ್ನು ಉದ್ದೇಶಿಸಿ ಮಾತನಾಡುತ್ತಾ ಸಮುದಾಯ ನೀಡಿದ ಕೊಡುಗೆಗಳು ಕಲಾ ಸಂಸ್ಕೃತಿಯ ಪರಂಪರೆಗೆ ಇತಿಹಾಸವಾಗಿದ್ದು ವಿದ್ಯೆ ಇಲ್ಲದ್ದರೂ ಕಲಾಚತುರತೆಯಲ್ಲಿ ನಾವುಗಳುಕುಲ ಕಸುಬನ್ನು ಮೈಗೂಡಿಸಿಕೊಂಡು ಕಳೆದು ಬಂದಿದ್ದು ನಮಗೆ ದೊರಕಬೇಕಾದ ಸಾಮಾಜಿಕ ನ್ಯಾಯ ಬದ್ಧತೆ ದೊರಕದೆ ಇದ್ದು ಇಂತಹ ಸಂದರ್ಭಗಳಲ್ಲಿ ಜಾಗೃತರಾಗಿ ಸಮುದಾಯದ ಬೆಳವಣಿಗೆಗೆ ದುಡಿಯಬೇಕು ಎಂದು ಮಾತನಾಡಿದರು.ರಾಜ್ಯದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆ ಇದ್ದು 102 ಪಂಗಡಗಳಿದ್ದು ಈ ಪಂಗಡಗಳಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ್ದು ಸರ್ಕಾರದ ಸದುಪಯೋಗ ಪಡೆಯುವ ಸವಲತ್ತು ತೀರ ಹಿಂದುಳಿದಿದ್ದು ಇಂತಹ ಸಂದರ್ಭದಲ್ಲಿ ನಾವುಗಳು ಪರಿಶಿಷ್ಟ ಪಂಗಡ ಮೀಸಲಾತಿಯ ವರ್ಗಕ್ಕೆ ತರುವ ಪ್ರಯತ್ನ ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮಗಳ ಹಕ್ಕು ಬಾಧ್ಯತೆಗೆ ವಿಶ್ವಕರ್ಮ ಸಮುದಾಯ ಜಾಗೃತ ವಾಗಬೇಕಾಗಿದೆ. ಸಮುದಾಯವು ತೀರ ಹಿಂದೆ ಸಮುದಾಯಕ್ಕೆ ಸವಲತ್ತಿನ ದೊರಕದೆ ಶಿಕ್ಷಣ ಸಮುದಾಯ ಸಂಘಟನೆ ರಾಜಕೀಯಗಳಲ್ಲಿ ಸಂಘಟನಾ ಶಕ್ತಿಯು ಇಲ್ಲದೆ ಕುಲ ಕಸುಬುಗಳ ವೃತ್ತಿಯಲ್ಲಿಯೇ ಇದ್ದು ನಾವುಗಳು ಸಾಮಾಜಿಕ ನ್ಯಾಯ ಪಡೆಯದೆ ನಮ್ಮಗಳ ಇಚ್ಚ ಶಕ್ತಿಯ ಕೊರತೆಯಾಗಿದ್ದು ಅಂದಿನ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ ವೀರಪ್ಪಮೊಯ್ಲಿ ಅವರು ಪರಿಶಿಷ್ಟ ಪಂಗಡಗಳಿಗೆ ಪರಿಷ್ಕರಿಸುವ ನೀಡಿದ್ದರು ನಮ್ಮಗಳ ಹಕ್ಕು ಬಾದ್ಯತೆ ಸಲ್ಲಿಸದೆ ಕಾರಣ ದಿಂದ ದೂರವಾಯಿತು.ರಾಜ್ಯದ ಸುಮಾರು 745 ಹೋಬಳಿಗಳು ನಮ್ಮ ಸಮುದಾಯ ಬಾಂಧವರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಎಲ್ಲೆಡೆ ಭೇಟಿ ನೀಡಿ ಸಮುದಾಯದ ದುರುದ್ದೇಶಗಳು ಹಾಗೂ ಸಮುದಾಯದ ಪಾಲಿನ ಬಗ್ಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಪ್ರವಾಸ ಮಾಡುತ್ತಿದ್ದೀನಿ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಸಮುದಾಯದ ವತಿಯಿಂದ ವಿಧಾನ ಪರಿಷತ್ ಸದಸ್ಯರಾದ ಕೆ.ಪಿ.ನಂಜುಂಡಿ ರವರಿಗೆ ಗೌರವಾರ್ಪಣೆ ಮಾಡಲಾಯಿತು.ಸಮಾರಂಭದಲ್ಲಿ ತಾಲೂಕು ಅಧ್ಯಕ್ಷರಾದ ಕೃಷ್ಣಾಚಾರ್ ಮಂಡ್ಯ ಜಿಲ್ಲಾ ಕಾರ್ಯದರ್ಶಿಯಾದ ಮೋಹನ್ ಕುಮಾರ್ ತಾಲೂಕು ಸಂಘದ ಪದಾಧಿಕಾರಿಗಳಾದ ಲಕ್ಷ್ಮಿಸಾಗರ್ ವಿಶ್ವಮೂರ್ತಿ ದಿವಾಕರ್ ಅಭಿಜಿತ್ ಮಂಜುನಾಥಚಾರ್ ತಾಲೂಕಿನ ಎಲ್ಲಾ ಹೋಬಳಿಯ ಸಮುದಾಯ ಮುಖಂಡರುಗಳು ಹಾಜರಿದ್ದರು
