ಉದಯವಾಹಿನಿ, ದೆಹಲಿ: ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಪತಿಯೊಬ್ಬ ಪೊಲೀಸ್ ಅಧಿಕಾರಿಯಾಗಿರುವ ಪತ್ನಿ ಮೇಲೆಯೇ ಹಲ್ಲೆ ಮಾಡಿ ಕೊಲೆಗೈದಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ದೆಹಲಿ ಪೊಲೀಸ್ ವಿಶೇಷ ಘಟಕದ ಸ್ವಾಟ್ ಕಮಾಂಡೋ ಆಗಿದ್ದ 27 ವರ್ಷದ ಕಾಜಲ್ ಚೌಧರಿ ಮೃತ ದುರ್ದೈವಿ. ಅವರ ಪತಿ ಡಂಬಲ್ಸ್‌ನಿಂದ ಹಲ್ಲೆ ನಡೆಸಿ ಅವರ ತಲೆಯನ್ನು ಬಾಗಿಲಿಗೆ ಹಿಡಿದು ಚಚ್ಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಾಜಲ್ ಮತ್ತು ಅವರ ಪತಿ ಅಂಕುರ್ ಚೌಧರಿ ನಡುವೆ ಕೌಟುಂಬಿಕ ಸಮಸ್ಯೆಗಳ ಕುರಿತು ಜಗಳವಾದ ನಂತರ ಈ ಘಟನೆ ನಡೆದಿದೆ. ಮಹಿಳೆಯ ಕುಟುಂಬಸ್ಥರು ಆಕೆಯ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದಾರೆ. ಕಾಜಲ್ 2022ರಲ್ಲಿ ತಮ್ಮ ಪದವಿ ಪೂರ್ಣಗೊಳಿಸಿದರು. ಈ ಸಮಯದಲ್ಲಿ ಅವರು ಗನೌರ್‌ನ ಸಹ ನಿವಾಸಿ ಅಂಕುರ್ ಅವರನ್ನು ಭೇಟಿಯಾದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಕುಟುಂಬಗಳನ್ನು ಮನವೊಲಿಸಿ ವಿವಾಹವಾದರು. ಮದುವೆಗೆ ಮುಂಚಿತವಾಗಿ, ಕಾಜಲ್ 2023ರಲ್ಲಿ ದೆಹಲಿ ಪೊಲೀಸ್ ಕಮಾಂಡೋ ಆಗಿ ಆಯ್ಕೆಯಾದರು. ಅಂಕುರ್ ದೆಹಲಿಯಲ್ಲಿ ರಕ್ಷಣಾ ಸಚಿವಾಲಯದಲ್ಲಿ ಗುಮಾಸ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

ಆದರೆ ಮದುವೆಯಾದ ಕೂಡಲೇ ಸಮಸ್ಯೆಗಳು ಪ್ರಾರಂಭವಾದವು ಎಂದು ಮೃತ ಅಧಿಕಾರಿಯ ಕುಟುಂಬ ಆರೋಪಿಸಿದೆ. ಮದುವೆಯಾದ 15 ದಿನಗಳಲ್ಲಿ, ಅಂಕುರ್ ಕುಟುಂಬವು ಕಾರ್‌ ಮತ್ತು ವರದಕ್ಷಿಣೆಗಾಗಿ ಬೇಡಿಕೆ ಇಡಲು ಪ್ರಾರಂಭಿಸಿತು. ಕಾಜಲ್‍ಗೆ ನಿರಂತರವಾಗಿ ಕಿರುಕುಳ ನೀಡಿದ್ದರು. ಕೌಟುಂಬಿಕ ದೌರ್ಜನ್ಯದಿಂದಾಗಿ, ಕಾಜಲ್ 2024ರಲ್ಲಿ ದೆಹಲಿಗೆ ಸ್ಥಳಾಂತರಗೊಂಡರು. ಆದರೆ ಆಕೆಯ ಪತಿ ಹಣ ಮತ್ತು ಕಾರ್‌ ನೀಡುವಂತೆ ಒತ್ತಾಯಿಸುತ್ತಲೇ ಇದ್ದ ಮತ್ತು ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!