ಉದಯವಾಹಿನಿ, ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಂದು ವಿಮಾನ ಪತನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಒಂದು ಕಡೆ ಈ ವಿಮಾನ ಅಪಘಾತ ಸಂಜಯ್ ಗಾಂಧಿ ವಿಜಯ್ ರೂಪಾನಿ ಅವರಂತಹ ನಾಯಕರ ದುರಂತ ಸಾವುಗಳನ್ನ ನೆನಪಿಸಿದ್ರೆ, ಮತ್ತೊಂದು ಕಡೆ ವಿಮಾನ ಮತ್ತು ಹೆಲಿಕಾಪ್ಟರ್ ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಬದುಕುಳಿದ ರಾಜಕೀಯ ನಾಯಕರತ್ತ ಬೆಳಕು ಚೆಲ್ಲುತ್ತದೆ. ಇಂತಹ ವಿಮಾನ ಮತ್ತು ಹೆಲಿಕಾಪ್ಟರ್ ದುರಂತಗಳಲ್ಲಿ ಪವಾಡ ಸದೃಶವಾಗಿ ಪಾರಾದ ಪ್ರಮುಖ ರಾಜಕೀಯ ನಾಯಕರು ಯಾರ‍್ಯಾರು ಎಂಬ ಬಗ್ಗೆ ವಿವರ ಇಲ್ಲಿದೆ.1977ರಲ್ಲಿ ಮೊರಾರ್ಜಿ ದೇಸಾಯಿ 1977ರ ನವೆಂಬರ್ 4 ರಂದು. ದೆಹಲಿಯ ಪಾಲಂ ನಿಲ್ದಾಣದಿಂದ ಮೊರಾರ್ಜಿ ದೇಸಾಯಿ ಅವರನ್ನ ಹೊತ್ತೊಯ್ಯುತ್ತಿದ್ದ ವಿಮಾನವು ಅಸ್ಸಾಂಗೆ ಹೊರಟಿತ್ತು. ರಷ್ಯಾ ನಿರ್ಮಿತ ಟುಪೋಲೆವ್ ಟಿಯು-124 ವಿಮಾನವು ಇನ್ನೇನು ಲ್ಯಾಂಡಿಂಗ್ ಮಾಡಬೇಕು ಎನ್ನುವಷ್ಟರಲ್ಲಿ ಭತ್ತದ ಗದ್ದೆಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿತ್ತು. ಸಂಜೆ ವಿಮಾನ ರನ್‌ವೇಯಲ್ಲಿ ಇಳಿಯಲು ಸಿದ್ಧವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಎತ್ತರಕ್ಕೆ ಹಾರಿತು. ವಿಮಾನವು ರನ್‌ವೇಯನ್ನು ದಾಟಿ ವಾಯುನೆಲೆಯ ದೂರದಲ್ಲಿದ್ದ ಗದ್ದೆಗೆ ಅಪ್ಪಳಿಸಿತ್ತು. ವಿಮಾನ ಅಪ್ಪಳಿಸಿದ ರಭಸಕ್ಕೆ ಕಾಕ್‌ಪಿಟ್ ವಿಮಾನದಿಂದ ಬೇರ್ಪಟ್ಟಿತು. ಇಬ್ಬರು ಪೈಲಟ್‌ಗಳು ಮತ್ತು ಮೂವರು ಸಿಬ್ಬಂದಿ ಸಾವನ್ನಪ್ಪಿದರು. ಪತನಗೊಂಡ ನಂತರ 81 ವರ್ಷದ ಮೊರಾರ್ಜಿ ದೇಸಾಯಿ ಅವರನ್ನ ಕೂಡಲೇ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.
2004ರಲ್ಲಿ ಅಹ್ಮದ್ ಪಟೇಲ್, ಪೃಥ್ವಿರಾಜ್ ಚವಾಣ್ ಮತ್ತು ಕುಮಾರಿ ಸೆಲ್ಜಾ
2004 ರಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್, ಪೃಥ್ವಿರಾಜ್ ಚವಾಣ್ ಮತ್ತು ಕುಮಾರಿ ಸೆಲ್ಜಾ ಅವರು ಸಹ ವಿಮಾನ ಅಪಘಾತದಲ್ಲಿ ಸಿಲುಕಿದ್ದರು. ಭೀಕರ ಅಪಘಾತದ ಹೊರತಾಗಿಯೂ ಮೂವರು ನಾಯಕರು ಅಚ್ಚರಿಯಾಗಿ ಬದುಕುಳಿದರು. ತಕ್ಷಣದ ವೈದ್ಯಕೀಯ ಚಿಕಿತ್ಸೆಯಿಂದ ಅವರನ್ನ ರಕ್ಷಣೆ ಮಾಡಲಾಗಿತ್ತು.
2005 ರಲ್ಲಿ ಅಮರಿಂದರ್ ಸಿಂಗ್, ಪ್ರತಾಪ್ ಸಿಂಗ್ ಬಜ್ವಾ
2005 ರಲ್ಲಿ, ಪಂಜಾಬ್ ನಾಯಕರಾದ ಅಮರಿಂದರ್ ಸಿಂಗ್ ಮತ್ತು ಪ್ರತಾಪ್ ಸಿಂಗ್ ಬಜ್ವಾ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿತ್ತು. ಗಂಭೀರ ಗಾಯಗೊಂಡಿದ್ದ ಹೊರತಾಗಿಯೂ ತಕ್ಷಣದ ವೈದ್ಯಕೀಯ ಚಿಕಿತ್ಸೆಯಿಂದ ಬದುಕುಳಿದ್ದರು.
ಸುಖ್ವಿಂದರ್ ಸಿಂಗ್ ಬಾದಲ್ ಗ್ರೇಟ್ ಎಸ್ಕೇಪ್
ಪಂಜಾಬ್ ಮಾಜಿ ಸಿಎಂ ಸುಖ್ವಿಂದರ್ ಸಿಂಗ್ ಬಾದಲ್ ಅವರು ಅಧಿಕೃತ ಪ್ರಯಾಣದ ಸಮಯದಲ್ಲೇ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಲುಕಿದ್ದರು. ಪ್ರಯಾಣದ ಮಧ್ಯದಲ್ಲಿ ಇದ್ದಕ್ಕಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಎಚ್ಚೆತ್ತ ಪೈಲಟ್ ಸೇಫ್ ಲ್ಯಾಂಡಿಗ್ ಮಾಡಿದ್ದರಿಂದ ಬಾದಲ್ ಸಣ್ಣ ಗಾಯವೂ ಇಲ್ಲದೇ ಪಾರಾದರು.
