ಉದಯವಾಹಿನಿ, ಸಂಬಲ್ಪುರ (ಒಡಿಶಾ): ಸುಮಾರು ಮೂರು ದಶಕಗಳಿಂದ 25 ಕ್ಕೂ ಹೆಚ್ಚು ಕುಟುಂಬಗಳ 200 ಕ್ಕೂ ಹೆಚ್ಚು ಬುಡಕಟ್ಟು ಜನರು ಯಾವುದೇ ದಾಖಲೆಗಳಿಲ್ಲದೇ, ಸರ್ಕಾರದ ಯೋಜನಗೆಳ ಗೊಡವೆ ಇಲ್ಲದೇ ಜೀವನ ಸಾಗಿಸುತ್ತಿದ್ದಾರೆ.
ಸಂಬಲ್ಪುರ ಜಿಲ್ಲೆಯ ಜಮನ್‌ಕಿರಾ ಪೊಲೀಸ್ ಠಾಣೆಯ ಹಿಂದೆ ಇವರು ಗೂಡು ಕಟ್ಟಿಕೊಂಡು ತಮ್ಮ ಪಾಡಿಗೆ ತಾವು ಬದುಕು ಸಾಗಿಸುತ್ತಿದ್ದಾರೆ. ಆದರೆ ಇವರಿಗೆ ದಾಖಲೆಗಳಲ್ಲಿ, ಆಧಾರ್ ಕಾರ್ಡ್‌ಗಳನ್ನು ಇವರು ಹೊಂದಿಲ್ಲ. ಹೀಗಾಗಿ ಇವರು ಅಸ್ಥಿತ್ವದಲ್ಲೇ ಇಲ್ಲ. ಈ ಬುಡುಕಟ್ಟು ನಿವಾಸಿಗಳು ಬಹುತೇಕ ಎಲ್ಲಾ ಸರ್ಕಾರಿ ಯೋಜನೆಗಳು, ಪಡಿತರ, ವಸತಿ, ಶಿಕ್ಷಣ, ಆರೋಗ್ಯ ರಕ್ಷಣೆ, ಪಿಂಚಣಿಗಳಿಂದ ದೂರವೇ ಇದ್ದಾರೆ.

ಸಬರ್ ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಕುಟುಂಬಗಳು ದಶಕಗಳ ಹಿಂದೆ ಬಿಹಾರದಿಂದ ವಲಸೆ ಬಂದು ಜಮನ್‌ಕಿರಾದಲ್ಲಿ ನೆಲೆಸುವ ಮೊದಲು ಅಲೆಮಾರಿ ಜೀವನ ಸಾಗಿಸುತ್ತಿದ್ದರು. ವರ್ಷಗಳ ಕಾಲ ಜೇನುತುಪ್ಪ, ಮರ ಮತ್ತು ಎಲೆಗಳಂತಹ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ಜೀವನ ರೂಪಿಸಿಕೊಂಡು, ಜೀವ ಹಿಡಿದುಕೊಂಡು ಉಸಿರಾಡುತ್ತಿದ್ದಾರೆ. ದಾಖಲೆಗಳೇ ಇವರ ಬಳಿ ಇಲ್ಲ, ಇನ್ನು ಸ್ವಂತ ಭೂಮಿ ಅಥವಾ ಇತರ ಆಸ್ತಿ ಇರುವುದೆಲ್ಲಿಂದ ಬಂತು. ಹೀಗಾಗಿ ಇವರೆಲ್ಲ ಸರ್ಕಾರಿ ಭೂಮಿಯಲ್ಲಿ ಶಿಫ್ಟ್ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ಸುಮಾರು 30 ವರ್ಷಗಳಿಂದ ಈ ಪ್ರದೇಶದಲ್ಲಿಯೇ ಇವರೆಲ್ಲ ವಾಸಿಸುತ್ತಿದ್ದಾರೆ. ಆದರೆ, ಇವರಲ್ಲಿ ಬಹುತೇಕರಿಗೆ ಆಧಾರ್​ ಕಾರ್ಡ್​ ಗಳೇ ಇಲ್ಲ. ಕಾರಣ ಇಷ್ಟೇ ಇವರ ಬಳಿ ಜನನ ಪ್ರಮಾಣಪತ್ರಗಳಿಲ್ಲ.ಹೆಚ್ಚಿನ ಮಕ್ಕಳು ಮನೆಯಲ್ಲಿಯೇ ಜನಿಸಿದ ಕಾರಣ ಯಾರಲ್ಲೂ ಔಪಚಾರಿಕವಾಗಿ ಜನನ ದಾಖಲೆಗಳಿಲ್ಲ. ಆಧಾರ್ ನೋಂದಣಿ ಮಾಡಿಸಲು ಪ್ರಮುಖವಾಗಿ ಜನನ ಪ್ರಮಾಣ ಪತ್ರ ಕಡ್ಡಾಯ ಮಾಡಲಾಗಿದೆ. ವಿಪರ್ಯಾಸ ಎಂದರೆ ಅನೇಕ ವಯಸ್ಕರು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ. ಆದರೆ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ಅಗತ್ಯವಾದ ಆಧಾರ್ ಕಾರ್ಡ್​ ಬೇಕೇ ಬೇಕು. ಆದರೆ ಅದೇ ಇವರ ಬಳಿ ಇಲ್ಲ.
ಸರ್ಕಾರಿ ಸವಲತ್ತಿಲ್ಲದೇ ಕಂಗಾಲು; ಮಹಿಳೆಯರು ಸೌದೆ ಒಲೆಗಳ ಮೇಲೆ ಅಡುಗೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಶುದ್ಧ ಕುಡಿಯುವ ನೀರು ಇವರಿಗೆ ಮರೀಚಿಕೆಯಾಗಿದೆ. ಮಕ್ಕಳು ಅಪೌಷ್ಟಿಕತೆ ಮತ್ತು ಅನಾರೋಗ್ಯದಿಂದ ಬಳಲುತ್ತಿವೆ. ಆಧಾರ್ ಇಲ್ಲದೇ ಕುಟುಂಬಗಳು ಸಬ್ಸಿಡಿ ಅಕ್ಕಿ, ಎಲ್‌ಪಿಜಿ ಸಂಪರ್ಕ, ವಸತಿ ಯೋಜನೆಗಳು ಅಥವಾ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಮಕ್ಕಳಿಗೆ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಆಧಾರ್​ ಕಾರ್ಡ್ ಇಲ್ಲದೇ​ ಪ್ರವೇಶ ನಿರಾಕರಿಸುತ್ತಿವೆ. ಹೀಗಾಗಿ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರವೂ ದೊರೆಯುತ್ತಿಲ್ಲ.

Leave a Reply

Your email address will not be published. Required fields are marked *

error: Content is protected !!