ಉದಯವಾಹಿನಿ, ನವದೆಹಲಿ; ಭಾರತವು ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸುವ ಮೂಲಕ ಪೆಟ್ರೋಲಿಯಂ ವಸ್ತುಗಳ ಬಳಕೆಯನ್ನು ಶೇ 50ರಷ್ಟು ಕಡಿಮೆ ಮಾಡಿ, ಶೇ 50ರಷ್ಟು ಪಳೆಯುಳಿಕೆಯೇತರ ಇಂಧನಗಳ ಬಳಕೆಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇಂಧನ ದಕ್ಷತೆ ಸುಧಾರಿಸುವ ಮೂಲಕ ಮತ್ತು ಇಂಧನ ವ್ಯವಸ್ಥೆಗಳಲ್ಲಿ ಸ್ಥಿರತೆಯನ್ನು ತರುವ ಮೂಲಕ ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸಲು ಬಹುಮುಖಿ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಂಸತ್ತಿನಲ್ಲಿ ಮಂಡಿಸಿದ 2025-26ರ ಆರ್ಥಿಕ ಸಮೀಕ್ಷೆ ತಿಳಿಸಿದ್ದಾರೆ.
ಭಾರತವು ಪರಮಾಣು, ಸೌರ ಮತ್ತು ಪವನ ಶಕ್ತಿ, ಹಸಿರು ಹೈಡ್ರೋಜನ್, ಬ್ಯಾಟರಿ ಸಂಗ್ರಹಣೆ ಮತ್ತು ನಿರ್ಣಾಯಕ ಖನಿಜಗಳು ಸೇರಿದಂತೆ ವಿವಿಧ ವಲಯಗಳಲ್ಲಿನ ಉಪಕ್ರಮಗಳ ಸಂಯೋಜನೆಯ ಮೂಲಕ ಶೇ 50 ರಷ್ಟು ವಿದ್ಯುತ್​​ ಸಂಬಂಧಿತ ಇಂಧನ ಬಳಕೆಗೆ ಯೋಜನೆ ರೂಪಿಸಲಾಗಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ. ಇದು ಏಕಕಾಲದಲ್ಲಿ ಇಂಧನ ಸುರಕ್ಷತೆ ಮತ್ತು ಪರಿವರ್ತನೆಯ ಅಗತ್ಯಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಸಮೀಕ್ಷೆಯಲ್ಲಿ ಪ್ರತಿಪಾದಿಸಲಾಗಿದೆ.
ಭಾರತವು ಈಗಾಗಲೇ ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಶೇ 50 ಪ್ರತಿಶತ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಗುರಿಯನ್ನು ಮೀರಿ ಮುನ್ನುಗ್ಗುತ್ತಿದೆ. ಇದು ಡಿಸೆಂಬರ್ 2025 ರ ಅಂತ್ಯದ ವೇಳೆಗೆ ಶೇ 51.93ರಕ್ಕೆ ತಲುಪಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ಇದಕ್ಕೆ ಸೇರ್ಪಡೆಯಾಗಿರುವುದು ಗಮನಿಸಬೇಕಾದ ಅಂಶಗಳಾಗಿವೆ. ಪಳೆಯುಳಿಕೆಯೇತರ ಇಂಧನ ಆಧಾರಿತ ವಿದ್ಯುತ್ ಸಾಮರ್ಥ್ಯವನ್ನು ವಿಸ್ತರಿಸುವಲ್ಲಿ ಸರ್ಕಾರ ಕೈಗೊಂಡ ಕ್ರಮಗಳು ಗಣನೀಯ ಪ್ರಗತಿ ಕಂಡಿವೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಪರಮಾಣು ಮಿಷನ್, ಹಸಿರು ಹೈಡ್ರೋಜನ್ ಮಿಷನ್ ಮತ್ತು ಜೈವಿಕ ಇಂಧನ ಕಾರ್ಯಕ್ರಮದಂತಹ ಇತರ ಶುದ್ಧ ಇಂಧನ ಮೂಲಗಳನ್ನು ಬೆಂಬಲಿಸಲು ಹೊಸ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಮೀಕ್ಷೆ ಹೇಳಿದೆ. ಪಳೆಯುಳಿಕೆಯೇತರ ಇಂಧನ ಶಕ್ತಿಯನ್ನು ವಿಸ್ತರಿಸುವಲ್ಲಿ ಪ್ರಗತಿಯ ಹೊರತಾಗಿಯೂ ಸವಾಲುಗಳು ಹಾಗೇ ಉಳಿದಿವೆ. ಈ ಇಂಧನ ಮೂಲಗಳ ಹೆಚ್ಚಿನ ಬಳಕೆಗೆ ವಸ್ತು ಮತ್ತು ಶೇಖರಣಾ ವ್ಯವಸ್ಥೆಗಳು ಬೇಕಾಗಿವೆ. ಇವುಗಳ ಕೊರತೆ ಪ್ರಗತಿ ಸಾಧನೆಗೆ ಅಡ್ಡಿಗಳಾಗಿವೆ ಎಂಬ ವಿಚಾರವನ್ನೂ ಸಮೀಕ್ಷೆಯಲ್ಲಿ ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!