ಉದಯವಾಹಿನಿ, ಮುಂಬೈ: ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಅವರ ಹಠಾತ್ ನಿಧನದಿಂದಾಗಿ ಎನ್‌ಸಿಪಿ ಪಕ್ಷದಲ್ಲಿ ರಾಜಕೀಯ ಬದಲಾವಣೆಗಳು ಆರಂಭವಾಗಿವೆ. ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರಿಗೆ ಪಕ್ಷದಲ್ಲಿ ಹಾಗೂ ಮಹಾರಾಷ್ಟ್ರ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಕೊಡಿಸಲು ಆ ಪಕ್ಷದ ಶಾಸಕರು ಪ್ರಯತ್ನಿಸುತ್ತಿದ್ದಾರೆ.
ಈ ನಡುವೆ ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಸುನೇತ್ರಾ ಪವಾರ್ ಅವರು ಡಿಸಿಎಂ ಆದ್ರೆ ಅದುವೇ ಮುಂದೆ ಶರದ್ ಪವಾರ್ ಅವರ ಎನ್‌ಸಿಪಿ ಜೊತೆಗಿನ ವಿಲೀನಕ್ಕೆ ನಾಂದಿ ಹಾಡಲಿದೆಯೇ? ಎಂಬ ಕುತೂಹಲವೂ ದಟ್ಟವಾಗಿದೆ.
ರಾಜಕೀಯ ಬಿಸಿಬಿಸಿ ಚರ್ಚೆಗಳು ಜೋರಾಗಿರುವ ಹೊತ್ತಿನಲ್ಲೇ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಅವರ ನಿಧನ ಹೊಂದಿರುವುದರಿಂದ ತೆರವಾಗಿರುವ ಉಪಮುಖ್ಯಮಂತ್ರಿ ಹುದ್ದೆಗೆ, ಎನ್‌ಸಿಪಿ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನ ಮಹಾಯುತಿ ಮೈತ್ರಿಕೂಟ ಬೆಂಬಲಿಸುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
