ಉದಯವಾಹಿನಿ, 50 ಓವರ್‌ಗಳ ಒಳಗೆ ಬಣ್ಣ ಕಳೆದುಕೊಂಡು ಹಾನಿಗೊಳಗಾಗುವ ಸಾಮಾನ್ಯ ಲೆದರ್‌ ಬಾಲ್‌ಗಳಿಗೆ ಬದಲಾಗಿ ಹೊಸದಾಗಿ ಬಂದ ಲೆದರೆಟ್ ಬಾಲ್ ಕ್ರಿಕೆಟ್ ಅಕಾಡೆಮಿಗಳಿಗೆ ವರದಾನವಾಗಲಿವೆ ಎಂ‌ಬ ಬಗ್ಗೆ ಕ್ರಿಕೆಟ್‌ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಕಡಿಮೆ ಬೆಲೆಯ ದೀರ್ಘ ಕಾಲ ಬಾಳಿಕೆ ಬರುವ, ತರಬೇತಿಗೆ ಸೂಕ್ತವಾದ ಲೆದರೆಟ್ ಬಾಲ್‌ಗಳು ಕ್ರಿಕೆಟ್ ಅಕಾಡೆಮಿಗಳ ಲಾಭ ಹೆಚ್ಚಿಸಲಿವೆಯೇ? ಎಂಬ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
ಲೆದರೇಟ್‌ ಬಾಲ್‌ಗಳು ಸಾಂಪ್ರದಾಯಿಕ ಲೆದರ್‌ ಬಾಲ್‌ಗಳಿಗಿಂತಲೂ ಹೆಚ್ಚಿನ ಬಾಳಿಕೆ ಬರುವ ಚೆಂಡುಗಳಾಗಿವೆ. ಇವು 50 ಓವರ್‌ಗಳವರೆಗೆ ಆಕಾರವನ್ನು ಕಳೆದುಕೊಳ್ಳದೆ, ಸ್ಥಿರವಾದ ಬೌನ್ಸ್ ಮತ್ತು ಸ್ವಿಂಗ್ ಆಗುತ್ತವೆ. ವಿಶೇಷವಾಗಿ ಕ್ರಿಕೆಟ್ ಅಕಾಡೆಮಿಗಳು ಮತ್ತು ತರಬೇತಿಗಾಗಿ ವಿನ್ಯಾಸಗೊಳಿಸಲಾದ ಈ ಚೆಂಡುಗಳು ವಾಟರ್‌ ಪ್ರೂಫ್‌ ಆಗಿದ್ದು, ದೀರ್ಘ ಕಾಲ ಬಾಳಿಕೆ ಬರುತ್ತವೆ. ಅಲ್ಲದೇ ಬಣ್ಣವನ್ನು ಕಳೆದು ಕೊಳ್ಳದೇ ಸದಾ ಹೊಸ ಬಾಲ್‌ಗಳಂತೆಯೇ ಮಿಂಚಲಿವೆ. ಭಾರತದಲ್ಲಿನ 15,000ಕ್ಕೂ ಹೆಚ್ಚು ಕ್ರಿಕೆಟ್ ಅಕಾಡೆಮಿಗಳಿಗಾಗಿ ವಿಶೇಷವಾಗಿ ಈ ಬಾಲ್‌ ತಯಾರಿಸಲಾಗಿದೆ. ಕೈಗೆಟುಕುವ ಬೆಲೆ: ಇವುಗಳ ಬೆಲೆ ಸಾಮಾನ್ಯವಾಗಿ 450 ರೂ. – 500 ರೂ. ಇದೆ. ಇದು ಕ್ರಿಕೆಟ್‌ ಅಕಾಡೆಮಿಗಳಿಗೆ ಆರ್ಥಿಕವಾಗಿ ಲಾಭದಾಯಕವಾಗಿದೆ. ಇದೆ ಬೆಲೆಗೆ ಲೆದರ್‌ ಬಾಲ್‌ಗಳು ಲಭ್ಯವಿದ್ದರೂ ಅದರ ಬಾಳಿಕೆ ಹಾಗೂ ಬಣ್ಣ ದೀರ್ಘಕಾಲದವರೆಗೂ ಉಳಿಯುವುದಿಲ್ಲ.

 

Leave a Reply

Your email address will not be published. Required fields are marked *

error: Content is protected !!