ಉದಯವಾಹಿನಿ, ಮುಂಬೈ/ಕೊಲಂಬೊ: ಕ್ರಿಕೆಟ್ ಪ್ರೇಮಿಗಳಿಗೆ ವರ್ಲ್ಡ್ ಕಪ್ ಹಬ್ಬ ಇಂದಿನಿಂದ ಶುರುವಾಗ್ತಿದೆ. ಇಂದು ಮೊದಲ ದಿನವೇ ಮೂರು ಪಂದ್ಯಗಳು ನಡೆಯಲಿದ್ದು, ಒಟ್ಟು 6 ತಂಡಗಳು ಕಾದಾಟ ನಡೆಸಲಿವೆ. ಹೌದು. ಈ ಬಾರಿ ವಿಶ್ವ ಹಲವು ವಿಶೇಷತೆಗಳಿಂದ ಕೂಡಿದೆ. ಮೊದಲ ದಿನವೇ ಭಾರತ ಮತ್ತು ಶ್ರೀಲಂಕಾದಲ್ಲಿ ಒಟ್ಟು ಮೂರು ಪಂದ್ಯಗಳು ನಡೆಯಲಿದ್ದು, 6 ತಂಡಗಳು ಹಣಾಹಣಿ ನಡೆಸಲಿವೆ. ಬೆಳಗ್ಗೆ 11 ಗಂಟೆಗೆ ಪಾಕಿಸ್ತಾನ vs ನೆದರ್ಲೆಂಡ್, ಮಧ್ಯಾಹ್ನ 3 ಗಂಟೆಗೆ ವೆಸ್ಟ್ ಇಂಡೀಸ್ vs ಸ್ಕಾಟ್‌ಲೆಂಡ್ ಹಾಗೂ ರಾತ್ರಿ 7 ಗಂಟೆಗೆ ಭಾರತ vs ಯುಎಸ್‌ಎ ನಡುವೆ ಪಂದ್ಯ ನಡೆಯಲಿದೆ. ಆದ್ರೆ ಈ ಬಾರಿ ವಿಶ್ವಕಪ್ ಭಾರತೀಯ ಆಟಗಾರರಿಂದಲೇ ತುಂಬಿರಲಿದೆ. ಟೀಂ ಇಂಡಿಯಾ ಮಾತ್ರವಲ್ಲದೇ ಬಿಟ್ಟು ಸುಮಾರು 40 ಭಾರತೀಯ ಆಟಗಾರರು ವಿವಿಧ ವಿದೇಶಿ ತಂಡಗಳಲ್ಲಿ ಆಡುತ್ತಿದ್ದಾರೆ ಅನ್ನೋದೇ ವಿಶೇಷ.
20 ತಂಡಗಳಲ್ಲಿ 40 ಭಾರತೀಯ ಆಟಗಾರರ ಹವಾ : ಭಾರತದಲ್ಲಿ ಕ್ರಿಕೆಟ್ ಪ್ರೇಮಿಗಳು ಮಾತ್ರವಲ್ಲ ಕ್ರಿಕೆಟ್ ಆಟಗಾರರ ಸಂಖ್ಯೆ ಕೂಡ ಹೆಚ್ಚಿದೆ. ಬರೀ ಭಾರತದಲ್ಲಿ ಮಾತ್ರವಲ್ಲ ಭಾರತದಿಂದ ಬೇರೆ ದೇಶಕ್ಕೆ ವಲಸೆ ಹೋಗಿರುವ ಭಾರತೀಯರು ಕೂಡ ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿದ್ದು, ವಿದೇಶಿ ಟೀಂನಲ್ಲಿ ಸ್ಥಾನ ಪಡೆದು ಸಕ್ಸಸ್ ಆಗಿದ್ದಾರೆ. ಯುಎಸ್ಎ ಕೆನಡಾ ಮತ್ತು ಯುಎಇ ತಂಡಗಳಿಂದ 23 ಭಾರತೀಯ ಆಟಗಾರರು ಮೈದಾನಕ್ಕಿಳಿಯಲಿದ್ದಾರೆ. ಮುಂಬೈ ಮೂಲದ ಅಮೆರಿಕನ್ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ವಿರುದ್ಧ ಸೆಣೆಸಲಿದ್ದಾರೆ. ಐಸಿಸಿ ಟಿ20 ವಿಶ್ವಕಪ್ 2026 ಗಾಗಿ ಕೆನಡಾದ ತಂಡವು ಒಟ್ಟು 11 ಭಾರತೀಯ ಆಟಗಾರರನ್ನ ಆಯ್ಕೆ ಮಾಡಿಕೊಂಡಿದೆ. ಯುಎಸ್ಎ ತಂಡದಲ್ಲಿ 9 ಭಾರತೀಯರಿದ್ದಾರೆ. ಓಮನ್ ತಂಡದಲ್ಲಿ 7 ಭಾರತೀಯರಿದ್ದಾರೆ. ಯುಎಇ ತಂಡದಲ್ಲಿ ಭಾರತೀಯ ಮೂಲದ 7 ಆಟಗಾರರಿದ್ದಾರೆ. ಎಲ್ಲಾ ವಿದೇಶಿ ತಂಡಗಳು ಸೇರಿದಂತೆ, ಸುಮಾರು 40 ಭಾರತೀಯ ಕ್ರಿಕೆಟಿಗರು ಈ ವಿಶ್ವಕಪ್ನಲ್ಲಿ ವಿವಿಧ ತಂಡಗಳಿಗಾಗಿ ಆಡಲಿದ್ದಾರೆ.
