ಉದಯವಾಹಿನಿ ಇಂಡಿ : ಇವರಿಂದ ಪ್ರಧಾನ ಮಂತ್ರಿ ಫಸಲ್ ಬಿಮಾ ( ವಿಮಾ ) ಯೋಜನೆ ಹಿಂಗಾರು – ಬೇಸಿಗೆ 2023 – 24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿಯನ್ನು  ನೀಡಿರುತ್ತದೆ ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಯನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಂದೆ ಅನುಷ್ಠಾನಗೊಳಿಸಲಾಗುತ್ತದೆ. ಅದರಂತೆ ಇಂಡಿ ತಾಲೂಕಿನಲ್ಲಿ ಹೋಬಳಿ ಮಟ್ಟಕ್ಕೆ ಮತ್ತು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಮುಂಗಾರು ಹಂಗಾಮಿನ ಅಧಿಸೂಚಿತ ಬೆಳೆಗಳಾದ ತೊಗರೆ, ಮೆಕ್ಕೆಜೋಳ, ಹತ್ತಿ,ಸೂರ್ಯಕಾಂತಿ,ಶೇಂಗಾ, ಸಜ್ಜೆ, ನೀರಾವರಿ ಮತ್ತು ಮಳೆಯಾಶ್ರಿತ  ಬೆಳೆಗಳಿಗೆ ವಿಮಾ ಯೋಜನೆಯಲ್ಲಿ  ರೈತರು ಪಾಲ್ಗೊಳ್ಳಬಹುದಾಗಿರುತ್ತದೆ. ಬೆಳೆವಾರು ನೋಂದಣಿಗೆ ನಿಗದಿಪಡಿಸಿದ ಅಂತಿಮ ದಿನಾಂಕಗಳು ಈ ರೀತಿಯಾಗಿವೆ ತೊಗರೆ, ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜೆ, ಈ ಎಲ್ಲಾ ಬೆಳೆಗಳಿಗೆ ಕೊನೆಯ ದಿನಾಂಕವು 31.07.2023 ರಂದು ಆಗಿರುತ್ತದೆ. ಆದರೆ ತೊಗರೆ ಬೆಳೆಗೆ 16.08.2023 ರಂದು ಕೊನೆಯ ದಿನಾಂಕವಾಗಿರುತ್ತದೆ. ಈ ಕೊನೆಯ ದಿನಾಂಕದ ಒಳಗಡೆ ರೈತರು ವಿಮಾ ಯೋಜನೆ ಮಾಡಿಸಬೇಕು ಅದರಂತೆ ಅಧಿಕಾರಿಗಳು ಈ ರೀತಿಯಾಗಿ ಸೂಚನೆ ನೀಡಿದ್ದಾರೆ 01) ರೈತರು ಕಡ್ಡಾಯವಾಗಿ ಪ್ರೂಟ್ಸ್ ಐ ಡಿ ( ಎಫ್ ಐ ಡಿ ) ಮತ್ತು ಬ್ಯಾಂಕಿನಲ್ಲಿ ಖಾತೆ ಹೊಂದಿರಬೇಕು ಮತ್ತು ಎನ್ ಎಫ್ ಸಿ ಐ ಆಧಾರ ಜೋಡಣೆ ಆಗಿರಬೇಕು.02) ವಿಮಾ ಮತ್ತು ಬೆಳೆ ಸಾಲ ಪಡೆಯುವ ಅಥವಾ ಬೆಳೆಯ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ.03) ಗ್ರಾಮ ಪಂಚಾಯತ ಮಟ್ಟದ ಬೆಳೆಗಳಿಗೆ ವಿಮಾ ಕಂತು  ತುಂಬಲು ಕೊನೆಯ ದಿನಾಂಕ 31 – 07 – 2023 ಆಗಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಮಹಾದೇವಪ್ಪ ಏವೂರ ಇವರು ಮಾಧ್ಯಮಕ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!