ಉದಯವಾಹಿನಿ, ಕನ್ನಡ ಓಟಿಟಿ ಪ್ರೇಕ್ಷಕರಿಗಾಗಿ ಮತ್ತೊಂದು ಹೊಸ ಕ್ರೈಮ್-ಡ್ರಿಲ್ಲರ್ ವೆಬ್ ಸರಣಿ ಸಿದ್ಧವಾಗಿದ್ದು, ‘ರಾಕ್ಷಸ’ ಎಂಬ ಈ ಸರಣಿ ಶೀಘ್ರದಲ್ಲೇ ಜೀ-5 ಕನ್ನಡದಲ್ಲಿ ಪ್ರಸಾರವಾಗಲಿದೆ. ಉತ್ತರ ಕರ್ನಾಟಕ ಹಿನ್ನೆಲೆಯ ಕಥಾಹಂದರ ಹೊಂದಿರುವ ಈ ಸರಣಿಯ ಟ್ರೈಲರ್ ಈಗಾಗಲೇ ಗಮನ ಸೆಳೆದಿದೆ.
ಈ ಪ್ರಾಜೆಕ್ಟ್‌ನ್ನು ತರುಣ್ ಸುಧೀರ್ ತಮ್ಮ ಬ್ಯಾನರ್ ಮೂಲಕ ನಿರ್ಮಿಸಿದ್ದು, ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮಯೂರಿ, ಅಭಿಜಿತ್, ಅವಿನಾಶ್, ಮಾಳವಿಕಾ ಹಾಗೂ ಅಪ್ಪಣ್ಣ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!