ಉದಯವಾಹಿನಿ, ಭಾರತ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಗ್ರೂಪ್-ಎ ಹಂತದ ಪಂದ್ಯದಲ್ಲಿ ಯುಎಸ್‌ಎ ವೇಗದ ಬೌಲರ್ ಸೌರಭ್ ನೇತ್ರವಾಳ್ಕರ್ ಅನಗತ್ಯ ದಾಖಲೆಯೊಂದನ್ನು ಹೆಗಲೇರಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೌಲಿಂಗ್ ಸ್ಪೆಲ್ ಹಾಕಿದ ಅನಗತ್ಯ ದಾಖಲೆಯನ್ನು ಅವರು ಬರೆದಿದ್ದಾರೆ. ಎಡಗೈ ವೇಗಿ ಆಗಿರುವ ನೇತ್ರವಾಳ್ಕರ್ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್ ಅನ್ನು ವಿಕೆಟ್‌ ಪಡೆಯದೆ 65 ರನ್‌ಗಳನ್ನು ಬಿಟ್ಟುಕೊಟ್ಟರು. ಆ ಮೂಲಕ ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯ (0/64) ಅವರ ದಾಖಲೆಯನ್ನು ಹಿಂದಿಕ್ಕಿದರು. ತಮ್ಮ ಕೊನೆಯ ಎರಡು ಓವರ್‌ಗಳಲ್ಲಿ 34 ವರ್ಷದ ನೇತ್ರವಾಳ್ಕರ್ ಅವರನ್ನು ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಸಂಪೂರ್ಣವಾಗಿ ದಂಡಿಸಿದರು.

ಸೂರ್ಯಕುಮಾರ್ ಯಾದವ್ ಅಜೇಯ 84 ರನ್‌ಗಳ ಅಬ್ಬರದ ಇನಿಂಗ್ಸ್ ಮೂಲಕ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 161 ರನ್‌ಗಳ ಸವಾಲಿನ ಮೊತ್ತವನ್ನು ಕಲೆ ಹಾಕಿತು. ಈ ಇನಿಂಗ್ಸ್ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತೀಯ ನಾಯಕನೊಬ್ಬ ಸಾಧಿಸಿದ ಎರಡನೇ ಅತಿ ದೊಡ್ಡ ವೈಯಕ್ತಿಕ ಸ್ಕೋರ್ ಆಗಿದೆ. ಅಂದ ಹಾಗೆ ಈ ಪಂದ್ಯದಲ್ಲಿ ಯುಎಸ್‌ಎ ವೇಗಿ ಸೌರಭ್‌ ನೇತ್ರವಾವಾಳ್ಕರ್‌ ವಿಕೆಟ್‌ ಪಡೆಯದೆ ಅತ್ಯಂತ ದುಬಾರಿ ಬೌಲರ್‌ ಎನಿಸಿಕೊಂಡರು.

ಟಿ20 ವಿಶ್ವಕಪ್‌ ಇತಿಹಾಸದ ಅತ್ಯಂತ ದುಬಾರಿ ಬೌಲಿಂಗ್‌ ಸ್ಪೆಲ್‌ಗಳು
ಸೌರಭ್‌ ನೇತ್ರವಾಳ್ಕರ್ (ಅಮೆರಿಕಾ) 65 ರನ್‌ vs ಭಾರತ

ಸನತ್‌ ಜಯಸೂರ್ಯ (ಶ್ರೀಲಂಕಾ) 64 ರನ್‌ vs ಪಾಕಿಸ್ತಾನ

ಮುಶ್ರಾಫೆ ಮೊರ್ತಾಝಾ (ಬಾಂಗ್ಲಾದೇಶ) 63 ರನ್‌ vs ಪಾಕಿಸ್ತಾನ

ಲಮೆಕ್‌ ಒನ್ಯೋಂಗಾ (ಕೀನ್ಯಾ) 61 ರನ್‌ vs ಶ್ರೀಲಂಕಾ

ಸ್ಟುವರ್ಟ್‌ ಬ್ರಾಡ್‌ (ಇಂಗ್ಲೆಂಡ್) 60 ರನ್‌ vs ಭಾರತ

ಮಿಚೆಲ್‌ ಸ್ಟಾರ್ಕ್‌ (ಆಸ್ಟ್ರೇಲಿಯಾ) 60 ರನ್‌ vs ನ್ಯೂಜಿಲೆಂಡ್‌

Leave a Reply

Your email address will not be published. Required fields are marked *

error: Content is protected !!