ಉದಯವಾಹಿನಿ, ಐಪಿಎಲ್ ಫ್ರಾಂಚೈಸಿಯಲ್ಲಿ ಹೊಸ ಜವಾಬ್ದಾರಿ ನಿರ್ವಹಿಸಲು ರಾಜಸ್ಥಾನ್ ರಾಯಲ್ಸ್ ತಂಡ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ. ಆದರೆ ಗಂಭೀರ್‌ ರಾಷ್ಟ್ರೀಯ ತಂಡದೊಂದಿಗೆ ನಡೆಯುತ್ತಿರುವ ಬದ್ಧತೆಗಳಿಂದಾಗಿ ಅದನ್ನು ವಹಿಸಿಕೊಳ್ಳುವ ಸಾಧ್ಯತೆ ಕಡಿಮೆ.ಆಜ್ ತಕ್‌ ನೀಡಿದ ಮಾಹಿತಿಯ ಪ್ರಕಾರ, ರಾಜಸ್ಥಾನ್ ರಾಯಲ್ಸ್‌ನ ಹೊಸ ಪಾಲುದಾರರೊಬ್ಬರು ಗಂಭೀರ್ ಅವರನ್ನು ಸಂಪರ್ಕಿಸಿ, ಹಿರಿಯ ಸಾಮರ್ಥ್ಯದಲ್ಲಿ, ಮಾರ್ಗದರ್ಶಕ, ಸಿಇಒ ಅಥವಾ ಕಾರ್ಯತಂತ್ರದ ಪಾಲುದಾರರಾಗಿ ಫ್ರಾಂಚೈಸಿಯ ಭಾಗವಾಗಲು ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದೆ.
2008ರ ಐಪಿಎಲ್ ಚಾಂಪಿಯನ್‌ ರಾಜಸ್ಥಾನ್‌ ರಾಯಲ್ಸ್‌ ತಂಡ ಹೊಸ ಮಾಲೀಕತ್ವದ ಹುಡುಕಾಟದಲ್ಲಿದೆ. ಹೊಸ ಹೂಡಿಕೆದಾರರು ಶೀಘ್ರದಲ್ಲೇ ಮಂಡಳಿಗೆ ಬರುವ ನಿರೀಕ್ಷೆಯಿದೆ. ಇದರ ಬೆನ್ನಲ್ಲೇ ಈ ಬೆಳವಣೆಗೆ ನೆಡೆದಿದೆ ಎನ್ನಲಾಗಿದೆ. ಕಳೆದ ಆವೃತ್ತಿಯಲ್ಲಿ ರಾಹುಲ್‌ ದ್ರಾವಿಡ್‌ ಕೋಚ್‌ ಆಗಿದ್ದರು. ಆದರೆ ಅವರು ಈ ಬಾರಿಯ ಆಟಗಾರರ ಮಿನಿ ಹರಾಜಿಗೆ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತಂಡದಿಂದ ಹೊರಬಂದಿದ್ದರು.

ಗಂಭೀರ್ ಆರ್‌ಆರ್ ಸೇರಲು ಏಕೆ ಸಾಧ್ಯವಿಲ್ಲ?
ರಾಜಸ್ಥಾನ ರಾಯಲ್ಸ್‌ನ ಆಸಕ್ತಿಯ ಹೊರತಾಗಿಯೂ, ಭಾರತದ ಮುಖ್ಯ ಕೋಚ್ ಆಗಿರುವ ಗಂಭೀರ್ ಅವರ ಪ್ರಸ್ತುತ ಸ್ಥಾನವು ಈ ಹಂತದಲ್ಲಿ ಐಪಿಎಲ್ ಫ್ರಾಂಚೈಸಿಗೆ ಔಪಚಾರಿಕವಾಗಿ ಸೇರಲು ಅಸಾಧ್ಯವಾಗಿದೆ. ತಂಡದ ಪಾತ್ರ, ಮಾಲೀಕತ್ವದ ಸಾಮರ್ಥ್ಯ ಅಥವಾ ಸಲಹಾ ಸ್ಥಾನದಲ್ಲಿ ಅವರು ತೊಡಗಿಕೊಳ್ಳುವುದು ಅಸಾಧ್ಯ. ಏಕೆಂದರೆ ಬಿಸಿಸಿಐನ ನಿಯಮ 38(4) ರಡಿಯಲ್ಲಿ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ. ರಾಷ್ಟ್ರೀಯ ತಂಡದ, ಅಥವಾ ಬಿಸಿಸಿಐನ ಯಾವುದೇ ಹುದ್ದೆ ಹೊಂದಿರುವ ವ್ಯಕ್ತಿಗಳು ಐಪಿಎಲ್‌ನಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಒಂದೊಮ್ಮೆ ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕಿದ್ದರೆ ಅವರು ಬಿಸಿಸಿಐ ಹುದ್ದೆಗಳನ್ನು ತ್ಯಜಿಸಬೇಕು.

Leave a Reply

Your email address will not be published. Required fields are marked *

error: Content is protected !!