ಉದಯವಾಹಿನಿ, ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್‌ನ ಎರಡನೇ ದಿನ ಜಮ್ಮು ಕಾಶ್ಮೀರ ಉತ್ತಮ ಸ್ಥಿತಿಯಲ್ಲಿದ್ದು 6 ವಿಕೆಟ್‌ ನಷ್ಟಕ್ಕೆ 156 ಓವರ್‌ಗಳಲ್ಲಿ 527 ರನ್‌ ಹೊಡೆದಿದೆ. ಉತ್ತಮ ಸ್ಥಿತಿಯಲ್ಲಿದ್ದರೂ ಜಮ್ಮು ಕಾಶ್ಮೀರದ ನಾಯಕ ಪರಾಸ್ ಡೋಗ್ರಾ ಕರ್ನಾಟಕ( ಅನೀಶ್ ಕೆವಿ ಅವರ ಜೊತೆ ಕಿತ್ತಾಟ ನಡೆಸಿದ್ದಾರೆ.  ಮೊದಲ ದಿನ 2 ವಿಕೆಟ್‌ ನಷ್ಟಕ್ಕೆ 284 ರನ್‌ ಹೊಡೆದಿದ್ದ ಜಮ್ಮು ಕಾಶ್ಮೀರ ಇಂದು ನಿಧಾನಗತಿಯಲ್ಲಿ ಆಟವಾಡಿ 69 ಓವರ್‌ಗಳಲ್ಲಿ 243 ರನ್‌ ಗಳಿಸಿತು. ಸಂಜೆಯ ವೇಳೆ ಬ್ಯಾಡ್‌ ಲೈಟ್‌ ಕಾರಣದಿಂದ ಒಂದು ಗಂಟೆ ಬಾಕಿ ಇರುವಂತೆಯೇ ಪಂದ್ಯವನ್ನು ಸ್ಥಗಿತಗೊಳಿಸಲಾಯ್ತು.
ಔಟಾಗದೇ ಇದ್ದ ಶುಭಂ ಪುಂಡಿರ್‌ 121 ರನ್‌, ನಾಯಕ ಪರಾಸ್‌ ಡೋಗ್ರಾ 70 ರನ್‌, ಅಬ್ದುಲ್‌ ಸಮಾದ್‌ 60 ರನ್‌ ಹೊಡೆದರೆ ಸಾಹಿಲ್‌ ಲೋತ್ರಾ ಔಟಾಗದೇ 57 ರನ್‌, ಅಬಿದ್‌ ಮುಷ್ತಾಕ್‌ ಔಟಾಗದೇ 20 ರನ್‌ ಹೊಡೆದಿದ್ದಾರೆ. ಎರಡು ವಿಕೆಟ್‌ ಕಿತ್ತಿದ್ದ ಪ್ರಸಿದ್ಧ್‌ ಕೃಷ್ಣ ಇಂದು ವಿಕೆಟ್‌ ಕಿತ್ತರೆ, ವಿದ್ಯುಧರ್‌ ಪಾಟೀಲ್‌, ಶ್ರೇಯಸ್‌ ಗೋಪಾಲ್‌, ಶಿಖರ್‌ ಶೆಟ್ಟಿ ತಲಾ ಒಂದೊಂದು ವಿಕೆಟ್‌ ಪಡೆದರು.

ಆಟಗಾರರ ಮಧ್ಯೆ ಕಿತ್ತಾಟ: ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಮತ್ತು ಕರ್ನಾಟಕದ ಅನೀಶ್ ಕೆವಿ ಮೈದಾನದಲ್ಲಿಯೇ ಕಿತ್ತಾಟ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಇನ್ನಿಂಗ್ಸ್‌ನ ಪ್ರಸಿದ್ಧ್‌ ಕೃಷ್ಣ ಎಸೆದ 100 ನೇ ಓವರ್‌ನಲ್ಲಿ ಇಬ್ಬರು ಗಲಾಟೆ ಮಾಡಿದ್ದಾರೆ.ಪ್ರಸಿದ್ಧ್ ಕೃಷ್ಣ ಎಸೆತವನ್ನು ಪರಾಸ್ ಡೋಗ್ರಾ ಸ್ಲಿಪ್‌ನಲ್ಲಿದ್ದ ಇಬ್ಬರ ಮಧ್ಯೆ ಬಾಲ್‌ ಹೊಡೆದು ಬೌಂಡರಿ ಕಳುಹಿಸಿದರು. ಈ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಅನೀಶ್‌ ಮತ್ತು ಪರಾಸ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ನಂತರ ಡೋಗ್ರಾ, ಅನೀಶ್ ಹೆಲ್ಮೆಟ್‌ ಡಿಚ್ಚಿ ಹೊಡೆದಿದ್ದಾರೆ. ಜಗಳ ಜೋರಾಗುತ್ತಿದ್ದಂತೆ ಮಯಾಂಕ್‌ ಅಗರ್‌ವಾಲ್‌ ಸ್ಥಳಕ್ಕೆ ಬಂದರು. ಕೊನೆಗೆ ಅಂಪೈರ್‌ಗಳು ಮಧ್ಯಪ್ರವೇಶಿಸಿ ಜಗಳನ್ನು ನಿಲ್ಲಿಸಿದರು. ಜಗಳ ನಿಂತ ಬಳಿಕ ಪರಾಸ್ ಡೋಗ್ರಾ ಅನೀಶ್ ಕೆವಿ ಅವರ ಬಳಿ ಕ್ಷಮೆಯಾಚಿಸಲು ಮುಂದಾದರು. ಆದರೆ ಅನೀಶ್ ಕ್ಷಮೆಯಾಚನೆಯನ್ನು ಸ್ವೀಕರಿಸಲಿಲ್ಲ.

Leave a Reply

Your email address will not be published. Required fields are marked *

error: Content is protected !!