ಉದಯವಾಹಿನಿ, ಪಲ್ಲಕೆಲೆ: ನಾಯಕ ಹ್ಯಾರಿ ಬ್ರೂಕ್‌ ಅವರ ಸ್ಫೋಟಕ ಶತಕದ ನೆರವಿನಿಂದ ಸೂಪರ್‌-8 ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್‌ ರೋಚಕ 2 ವಿಕೆಟ್‌ಗಳ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಪಾಕಿಸ್ತಾನ 9 ವಿಕೆಟ್‌ ನಷ್ಟಕ್ಕೆ 164 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ಇನ್ನು 5 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ ನಷ್ಟಕ್ಕೆ 166 ರನ್‌ ಹೊಡೆಯಿತು.

ಹಾಗೆ ನೋಡಿದರೆ ಇಂಗ್ಲೆಂಡ್‌ 58 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಸಂಕಷ್ಟದ ಸಮಯದಲ್ಲಿ ತಂಡಕ್ಕೆ ನೆರವಾದ ಹ್ಯಾರಿ ಬ್ರೂಕ್‌ 100 ರನ್‌(51 ಎಸೆತ, 10 ಬೌಂಡರಿ, 4 ಸಿಕ್ಸ್‌) ಹೊಡೆದು ಔಟಾದರೆ ವಿಲ್‌ ಜಾಕ್ಸ್‌ 28 ರನ್‌ ಹೊಡೆದು ಔಟಾದರು. ಪಾಕ್‌ ಪರ ಫರ್ಹನ್‌ 63 ರನ್‌(45 ಎಸೆತ, 7 ಬೌಂಡರಿ, 2 ಸಿಕ್ಸ್‌) ಹೊಡೆದು ಔಟಾದರು.

ಶ್ರೀಲಂಕಾ ವಿರುದ್ಧ 51 ರನ್‌ ಜಯ ಪಡೆದಿದ್ದ ಇಂಗ್ಲೆಂಡ್‌ ಈಗ ಪಾಕ್‌ ವಿರುದ್ಧ ಜಯ ಸಾಧಿಸುವ ಮೂಲಕ ಗ್ರೂಪ್‌ 2ನಲ್ಲಿ ಸೆಮಿ ಪ್ರವೇಶಿಸಿದೆ. ನ್ಯೂಜಿಲೆಂಡ್‌- ಪಾಕ್‌ ಪಂದ್ಯ ಮಳೆಯಿಂದ ರದ್ದಾಗಿರುವ ಕಾರಣ ಬಿ ಗ್ರೂಪಿನಲ್ಲಿ ಸೆಮಿ ಪ್ರವೇಶಿಸುವ ಮತ್ತೊಂದು ತಂಡದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಪಾಕಿಸ್ತಾನಕ್ಕೆ ಶ್ರೀಲಂಕಾ ವಿರುದ್ಧ ಒಂದು ಪಂದ್ಯ ಬಾಕಿಯಿದೆ. ಶ್ರೀಲಂಕಾ ವಿರುದ್ಧ ಉತ್ತಮ ರನ್‌ ರೇಟ್‌ನಿಂದ ಗೆದ್ದರೂ ನ್ಯೂಜಿಲೆಂಡ್‌ ಫಲಿತಾಂಶದ ಮೇಲೆ ಪಾಕ್‌ ಸೆಮಿ ಭವಿಷ್ಯ ನಿಂತಿದೆ.

Leave a Reply

Your email address will not be published. Required fields are marked *

error: Content is protected !!