
ಉದಯವಾಹಿನಿ, ದೇವದುರ್ಗ :- ಕಾರ್ಗಿಲ್ ಸಂಘರ್ಷದಲ್ಲಿ ಬಾಗಿ ಯಾಗಿ ದೇಶಕ್ಕೆ ಸೇವೆ ಗೈದು, ಪ್ರಸ್ತುತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಎಫ್ ಡಿ ಎ ಆಗಿ ಕಾರ್ಯನಿರ್ವಹಿಸುತ್ತಿರುವ ಹೆಮ್ಮೆಯ ಪುತ್ರ ರಾಮಕೃಷ್ಣಪ್ಪ ರವರಿಗೆ ಪ್ರಗತಿಪರ ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು,
ಈ ಸಂದರ್ಭದಲ್ಲಿ ಎಂ ಆರ್ ಎಚ್ ಎಸ್ ಜಿಲ್ಲಾದ್ಯಕ್ಷ ಹನುಮಂತಪ್ಪ ಮನ್ನಾಪುರ, ಚಲುವಾದಿ ಮಹಾ ಸಭಾದ ತಾಲೂಕು ಅಧ್ಯಕ್ಷ ಚಿದಾನಂದಪ್ಪ ಶಿವಂಗಿ,ಅ. ಕ. ವಾ. ನಾ. ಮಹಾ ಸಭಾದ ತಾಲೂಕು ಅಧ್ಯಕ್ಷ ಮಾನೀಶಯ್ಯ ನಾಯಕಮಾನೀಶಯ್ಯನದೊಡ್ಡಿ, ಶಿವಪುತ್ರ ಉಪ್ಪಾರ, ಸಿನು ಚಲುವಾದಿ, ಭೀಮಣ್ಣ ವೀರಗೋಟ ಹಾಗೂ ಪ್ರಗತಿಪರ ಚಿಂತಕರು, ಬುದ್ದಿ ಜೀವಿಗಳು ಉಪಸ್ಥಿತರಿದ್ದರು
