ಉದಯವಾಹಿನಿ, ಬರ್ಮಿಂಗ್‌ಹ್ಯಾಮ್: ಭಾರತದ ಅಗ್ರ ಸಿಂಗಲ್ಸ್ ಆಟಗಾರ ಲಕ್ಷ್ಯ ಸೇನ್ ಅವರು ಮೂರು ಗೇಮ್‌ಗಳ ಸೆಣಸಾಟದಲ್ಲಿ ಹಾಂಗ್‌ಕಾಂಗ್‌ನ ಆ್ಯಂಗಸ್ ಇಂಗ್ ಕಾ ಲಾಂಗ್ ಅವರನ್ನು ಸೋಲಿಸಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಪುರುಷರ ಸಿಂಗಲ್ಸ್ ಕ್ವಾರ್ಟ‌್ರಫೈನಲ್‌ಗೆ ದಾಪುಗಾಲಿಟ್ಟರು. ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವ ಲಕ್ಷ್ಯ ಗುರುವಾರ ನಡೆದ ಪ್ರಿಕ್ವಾರ್ಟ‌್ರಫೈನಲ್ ಪಂದ್ಯದಲ್ಲಿ 21-19, 21-23, 21-10 ರಿಂದ ಇಂಗ್ ಕಾ ಲಾಂಗ್ ಅವರನ್ನು ಹಿಮ್ಮೆಟ್ಟಿಸಿದರು. ಉತ್ತರಾಖಂಡದ ಆಟಗಾರ ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಶಿ ಯುಕಿ ಅವರಿಗೆ ಆಘಾತ ನೀಡಿದ್ದರು.
2022ರಲ್ಲಿ ಫೈನಲ್ ತಲುಪಿದ್ದ ಲಕ್ಷ್ಯ ಅವರು ಕ್ವಾರ್ಟ‌್ರಫೈನಲ್‌ನಲ್ಲಿ ಆರನೇ ಶ್ರೇಯಾಂಕ ಪಡೆದಿರುವ ಚೀನಾದ ಆಟಗಾರ ಲಿ ಶಿಫೆಂಗ್ ಅವರನ್ನು ಎದುರಿಸಲಿದ್ದಾರೆ.
ಮೊದಲ ಗೇಮ್‌ನಲ್ಲಿ 4-6 ಹಿನ್ನಡೆಯಿಂದ ಚೇತರಿಸಿದ ಅವರು ಕ್ರಮೇಣ 15-11 ಮುನ್ನಡೆ ಸಾಧಿಸಿದರು. ನಂತರ ಅದನ್ನು 17-13ಕ್ಕೆ ಬೆಳೆಸಿದರು. ಆದರೆ ಹಾಂಗ್‌ಕಾಂಗ್ ಆಟಗಾರನಿಂದ ಹೋರಾಟ ಎದುರಾಯಿತು. ಸ್ಕೋರ್ 19-19ರಲ್ಲಿ ಸಮನಾಯಿತು. ಜಂಪ್ ಸ್ಮಾಶ್ ಮೂಲಕ ಒಂದು ಪಾಯಿಂಟ್ ಪಡೆದ ಲಕ್ಷ್ಯ, ಎದುರಾಳಿಯ ಹೊಡೆತ ಕೋರ್ಟ್‌ನಾಚೆ ಬಿದ್ದಾಗ ‘ಗೇಮ್ ಪಾಯಿಂಟ್’ ಸಹ ಗಳಿಸಿದರು.

Leave a Reply

Your email address will not be published. Required fields are marked *

error: Content is protected !!