ಉದಯವಾಹಿನಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಸಲ್ಮಾನ್ ಆಲಿ ಅಘಾ ರನೌಟ್ ವಿವಾದವು ತಾರಕಕ್ಕೇರಿದೆ. ಈ ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಕೆಲವರು ಇದು ಕ್ರೀಡಾ ಮನೋಭಾವ ಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದರೆ, ಇನ್ನು ಕೆಲವರು ಇದು ಅಂತಾರಾಷ್ಟ್ರೀಯ ಪಂದ್ಯ ಮತ್ತು ನೀವು ಗೆಲುವಿಗಾಗಿ ಆಡುವಾಗ ಇಂತಹ ವಿಷಯಗಳು ಸಂಭವಿಸುತ್ತವೆ ಎಂದಿದ್ದಾರೆ. ಆದಾಗ್ಯೂ, ಮೈದಾನದಲ್ಲಿ ಅನುಚಿತ ವರ್ತನೆಗಾಗಿ ಪಾಕಿಸ್ತಾನ ಬ್ಯಾಟರ್ ) ಸಲ್ಮಾನ್ ಅಲಿ ಅಘಾ ಅವರಿಗೆ ಐಸಿಸಿ ಬಿಗ್ ಶಾಕ್ ಕೊಟ್ಟಿದೆ.ರನೌಟ್ ನಿರ್ಧಾರ ತೆಗೆದುಕೊಂಡ ನಂತರ ಸಲ್ಮಾನ್ ಆಘಾ ತನ್ನ ಹೆಲ್ಮೆಟ್ ಮತ್ತು ಬ್ಯಾಟ್ ಅನ್ನು ಎಸೆದರು. ಮ್ಯಾಚ್ ರೆಫರಿ ನೀಮೂರ್ ರಶೀದ್ ನೀಡಿದ ದೂರಿನ ಆಧಾರದ ಮೇಲೆ ಆಘಾ ಲೆವೆಲ್ 1 ಅಪರಾಧ ಮಾಡಿದ್ದಾರೆ ಎಂದು ಐಸಿಸಿ ತೀರ್ಪು ನೀಡಿದೆ. ಐಸಿಸಿ ಆರ್ಟಿಕಲ್ 2.2 ರ ಅಡಿಯಲ್ಲಿ ಲೆವೆಲ್ 1 ಅಪರಾಧದಲ್ಲಿ ಸಲ್ಮಾನ್ ತಪ್ಪಿತಸ್ಥನೆಂದು ಕಂಡುಬಂದಿದೆ.
ಕ್ರಿಕೆಟ್ ಉಪಕರಣಗಳಿಗೆ ಅಗೌರವ ತೋರಿದ್ದಕ್ಕಾಗಿ ಆಘಾ ವಿರುದ್ಧ ದೂರು ದಾಖಲಾಗಿದೆ. ಅವರು ತಮ್ಮ ಹೆಲ್ಮೆಟ್, ಗ್ಲೌಸ್ ಮತ್ತು ಬ್ಯಾಟ್ ಅನ್ನು ಮೈದಾನಕ್ಕೆ ಎಸೆದಿರುವುದು ಕಂಡುಬಂದಿದೆ. ಹಿಂದೆಂದೂ ಅವರಿಂದ ಇಂತಹ ನಡವಳಿಕೆಯನ್ನು ನಾವು ನೋಡಿಲ್ಲ. ಆದರೆ, ಈಗ ನಾವು ಆಘಾ ಮಾಡಿದ್ದಕ್ಕಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ. ಅವರ ಖಾತೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಿದ್ದೇವೆ.
ಬಾಂಗ್ಲಾದೇಶ ಆಟಗಾರ ಲಿಟನ್ ದಾಸ್ ಅವರೊಂದಿಗಿನ ವಾಗ್ವಾದದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ಕೇವಲ ತಪ್ಪು ತಿಳುವಳಿಕೆ ಎಂದು ನಾವು ಪರಿಗಣಿಸಿದ್ದೇವೆ. ನಾವು ಕಾನೂನಿನ ಪ್ರಕಾರ ವರ್ತಿಸಿದ್ದೇವೆ. ನಾವು ನಿಷ್ಪಕ್ಷಪಾತವಾಗಿ ವರ್ತಿಸಿ ಈ ನಿರ್ಧಾರವನ್ನು ನೀಡಿದ್ದೇವೆ” ಎಂದು ಐಸಿಸಿ ಸ್ಪಷ್ಟಪಡಿಸಿದೆ
