
ಉದಯವಾಹಿನಿ ಜೇವರ್ಗ: ತಾಲೂಕಿನ ಬಿರಾಳ ಬಿ ಗ್ರಾಮ ಪಂಚಾಯತ ಚುನಾವಣೆ ಪ್ರತಿಷ್ಠೆಯ ಕಣವಾಗಿವಾಗಿ ಮಾರ್ಪಟ್ಟಿದೆ ಕಳೆದ 10 ವರ್ಷಗಳಿಂದ ಬಿರಾಳ ಬಿ ಪ಼ಂಚಾಯತಿ
ಆದರೆ ಸದ್ಯ ಆಗಸ್ಟ್ 3 ಕ್ಕೆ ನಡೆಯುವ ಪಂಚಾಯತ ಅಧ್ಯಕ್ಷ ಚುನಾವಣೆ ಬಿರಾಳ ಬಿ ಪಂಚಾಯತ ಜೆಡಿಎಸ್ ಪಕ್ಷದ ಹಿಡಿತದಿಂದ ಕೈ ತಪ್ಪುವ ಎಲ್ಲಾ ಲಕ್ಷಣಗಳು ಮೇಲ್ನೋಟಕ್ಕೆ ಗೊಚರಿಸುತ್ತಿವೆ.
ವಿಪರ್ಯಾಸವೆ಼ಂದರೆ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯಾರ್ಥಿಯಾಗಿ ಹೊನ್ನಾಳ ಗ್ರಾಮ ಪಂಚಾಯತ ಸದಸ್ಯೆ ಯ಼ಂಕಮ್ಮ ನಾಟಿಕಾರ ಸ್ಪರ್ಧಿಸುತ್ತಿದ್ದಾರೆ.
ಜೊತೆಗೆ ಬಿರಾಳ ಕೆ ಗ್ರಾಮದ ಪಂಚಾಯತ ಸದಸ್ಯೆ ಮಲ್ಲಮ್ಮ ತಳವಾರ ಅಧ್ಯಕ್ಷ ಸ್ಥಾನದ ಅಭ್ಯಾರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆದ್ದಾರೆ ಸದ್ಯದ ಮಾಹಿತಿ ಪ್ರಕಾರ ಪಂಚಾಯತ ಸದಸ್ಯರು ಪಕ್ಷಕ್ಕಿಂತ ತಮ್ಮ ಗ್ರಾಮಕ್ಕೆ ಅಧ್ಯಕ್ಷ ಸಿಕ್ಕರೆ ಅಭಿವೃದ್ಧಿ ಆಗುತ್ತದೆ ಇದು ಪಂಚಾಯತ ಸದಸ್ಯರ ಅಭಿಪ್ರಾಯವಾಗಿದೆ. ಉತ್ತರ ಆಗಸ್ಟ್ 3 ರವರೆಗೆ ಬಿರಾಳ ಬಿ ಪಂಚಾಯತ ವ್ಯಾಪ್ತಿಯ 7 ಹಳ್ಳಿಯ ಜನತೆ ಚುನಾವಣೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
‘ನಮ್ಮ ಗ್ರಾಮದವರು ಅಧ್ಯಕ್ಷರಾದರೆ ನಮ್ಮ ಗ್ರಾಮ ಅಭಿವೃದ್ಧಿಯಾಗುತ್ತದೆ.ಗ್ರಾಮದ ಹಿತದೃಷ್ಟಿಯಿಂದ ನಾನು ನಮ್ಮ ಗ್ರಾಮದ ಸದಸ್ಯೆ ಮಲ್ಲಮ್ಮ ತಳವಾರವರಿಗೆ ಬೆಂಬಲಿಸುವೆ.’
ಕೃಷ್ಣಮ್ಮ ಹುಜರತಿ
ಗ್ರಾಮ ಪಂಚಾಯತ ಸದಸ್ಯೆ ಬಿರಾಳ ಕೆ
‘ಸ್ಥಳೀಯ ಚುನಾವಣೆ ಪಕ್ಷಕ್ಕಿಂತ ವ್ಯಕ್ತಿಯ ನಡತೆಯ ಮೇಲೆ ನಡೆಯುತ್ತವೆ.ಇಲ್ಲಿ ಪಕ್ಷದ ಮುಖಂಡರಿಗಿಂತ ಸ್ಥಳೀಯ ಸದಸ್ಯರ ತೀರ್ಮಾನ ಅಂತಿಮ’
ಪರಮೇಶ್ವರ ಬಿರಾಳ
ಜೆಡಿಎಸ್ ಯುವ ಮುಖಂಡರು ಜೇವರ್ಗಿ.
