ಉದಯವಾಹಿನಿ, ಮುಂಬೈ: ಬಹುಭಾಷಾ ನಟಿ, ತೆಲುಗು ಸ್ಟಾರ್ ನಾಗ ಚೈತನ್ಯ ಅವರ ಗೆಳತಿ ಎಂದೇ ಖ್ಯಾತರಾಗಿರುವ ನಟಿ ಶೋಭಿತಾ ಧೂಳಿಪಾಲ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ಶೋಭಿತಾ ಭಾಗಿಯಾಗಿದ್ದರು. ರ್‍ಯಾಂಪ್ ವಾಕ್ ಮಾಡಿ ಗಮನ ಸೆಳೆದ ಚೆಲುವೆ, ಸಿಲ್ವರ್ ಕಲರ್ ಡ್ರೆಸ್‌ನಲ್ಲಿ ಮಿಂಚಿ, ತಮ್ಮ ಒಂದು ನೋಟದಿಂದ ಅಭಿಮಾನಿಗಳ ಹೃದಯವನ್ನೇ ಸ್ತಬ್ಧವಾಗಿಸಿದರು.
ನಟಿ ಶೋಭಿತಾ ಧೂಳಿಪಾಲ ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಒಬ್ಬರು. ಅಕ್ಕಿನೇನಿ ನಾಗಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಆಕೆ ಮಾತ್ರ ಆ ರೂಮರ್‌ಗಳಿಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿದ್ದಾಳೆ.
