ಉದಯವಾಹಿನಿ,  19ನೇ ಆವೃತ್ತಿಯ ಐಪಿಎಲ್‌ ಆರಂಭಕ್ಕೂ ಮುನ್ನ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ತಂಡದ ವೇಗಿ ಯಶ್ ದಯಾಳ್ ವೈಯಕ್ತಿಕ ಕಾರಣಗಳನ್ನು ನೀಡಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಇದನ್ನು ಫ್ರಾಂಚೈಸಿ ಕೂಡ ದೃಢಪಡಿಸಿದೆ.
ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಯಶ್​ ದಯಾಳ್ ತಂಡದ ಶಿಬಿರವನ್ನು ಕೂಡಿಕೊಳ್ಳದಾಗಲೇ ಅವರ ಅಭ್ಯತೆ ಬಗ್ಗೆ ಅನುಮಾನಗಳಿದ್ದವು. ಕೆಲವು ತಿಂಗಳ ಹಿಂದೆ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಲಾಯಿತು.
ಐಪಿಎಲ್ 2026ರ ಋತುವಿನಲ್ಲಿ ದಯಾಳ್‌ ಅವರ ಅನುಪಸ್ಥಿತಿಯನ್ನು ಆರ್‌ಸಿಬಿ ತಂಡದ ನಿರ್ದೇಶಕ ಮೊ ಬೊಬಟ್ ದೃಢಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ದಯಾಳ್ ಕೆಲವು ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವರು ಒಪ್ಪಂದದಲ್ಲಿ ಉಳಿದಿದ್ದರೂ, ಈ ಋತುವಿನಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು.
ದಯಾಳ್ ಅವರ ಸುತ್ತ ವಿವಾದಗಳು ಜುಲೈ 2025 ರಲ್ಲಿ ಪ್ರಾರಂಭವಾದವು, ಮದುವೆಯ ನೆಪದಲ್ಲಿ ಮಹಿಳೆಯನ್ನು ಶೋಷಿಸಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಜೈಪುರದಲ್ಲಿ ಪೋಸ್ಕೋ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಹೊಸ ಪ್ರಕರಣ ಹೊರಬಿತ್ತು.

ಈ ಬಾರಿಯ ಐಪಿಎಲ್‌ಗೆ ಮುಂಚಿತವಾಗಿ, ಯಶ್ ದಯಾಳ್ ತಮ್ಮ ದೀರ್ಘಕಾಲದ ಗೆಳತಿ ಶ್ವೇತಾ ಪುಂಡೀರ್ ಅವರನ್ನು ವಿವಾಹವಾದರು. ಈ ಜೋಡಿ ಫೆಬ್ರವರಿ 4 ರಂದು ನೋಯ್ಡಾದಲ್ಲಿ ವಿವಾಹವಾದರು.

Leave a Reply

Your email address will not be published. Required fields are marked *

error: Content is protected !!