ಉದಯವಾಹಿನಿ, ಐಪಿಎಲ್ 2026 ಆರಂಭಕ್ಕೂ ಮುನ್ನವೇ ದೊಡ್ಡ ಬದಲಾವಣೆ ನಡೆದಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಕ್ಯಾಪ್ಟನ್ ದಾಸುನ್ ಶನಕ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಅಧಿಕೃತವಾಗಿ ಸೇರ್ಪಡೆ ಮಾಡಿಕೊಂಡಿದೆ. ಗಾಯಗೊಂಡ ಸ್ಯಾಮ್ ಕರನ್ ಬದಲಿಗೆ ಶನಕ ಅವಕಾಶ ಪಡೆದಿದ್ದಾರೆ.
ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಲಾಹೋರ್ ಕಲಂದರ್ಸ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಶನಕ, ಈಗ ಆ ಟೂರ್ನಿಯಿಂದ ಹಿಂದೆ ಸರಿದು ಐಪಿಎಲ್‌ಗೆ ಸೇರ್ಪಡೆಯಾಗಿದ್ದಾರೆ. ಹಣಕಾಸಿನ ದೃಷ್ಟಿಯಿಂದಲೂ ಇದು ದೊಡ್ಡ ನಿರ್ಧಾರವಾಗಿದೆ. ಪಿಎಸ್‌ಎಲ್‌ನಲ್ಲಿ ಅವರಿಗೆ ಸುಮಾರು ₹25 ಲಕ್ಷ ಮಾತ್ರ ಸಿಗುತ್ತಿದ್ದರೆ, ಐಪಿಎಲ್‌ನಲ್ಲಿ ₹2 ಕೋಟಿ ಸಂಬಳ ದೊರೆಯುತ್ತಿದೆ.ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶನಕ, ಇದೀಗ ಬದಲಿ ಆಟಗಾರನಾಗಿ ದೊಡ್ಡ ಅವಕಾಶ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಆಡುವುದು ತಮ್ಮ ವೃತ್ತಿಜೀವನಕ್ಕೆ ಪ್ರಮುಖ ಹಂತ ಎಂದು ಶನಕ ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!