ಉದಯವಾಹಿನಿ, ಐಪಿಎಲ್ 2026 ಆರಂಭಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ಇಂಗ್ಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಬೆನ್ ಡಕೆಟ್ ಟೂರ್ನಿಯಿಂದ ತಮ್ಮ ಹೆಸರನ್ನು ಹಿಂಪಡೆದುಕೊಂಡಿದ್ದಾರೆ.
ಡಿಸೆಂಬ‌ರ್ ಹರಾಜಿನಲ್ಲಿ ₹2 ಕೋಟಿ ಮೊತ್ತಕ್ಕೆ ತಂಡಕ್ಕೆ ಸೇರ್ಪಡೆಯಾಗಿದ್ದಡಕೆಟ್, ಈ ಬಾರಿ ಐಪಿಎಲ್‌ನಲ್ಲಿ ಮೊದಲ ಬಾರಿ ಆಡಲು ಸಿದ್ಧರಾಗಿದ್ದರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲೆ ಗಮನ ಹರಿಸಲು, ವಿಶೇಷವಾಗಿ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಡಕೆಟ್ ತಮ್ಮ ನಿರ್ಧಾರಕ್ಕಾಗಿ ತಂಡದ ಬಳಿ ಕ್ಷಮೆ ಯಾಚಿಸಿದ್ದು, ಮುಂದಿನ ಸೀಸನ್‌ಗಳಲ್ಲಿ ಮರಳಿ ಆಡುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಈ ಹೆಜ್ಜೆ ಈಗ ಕಠಿಣ ಪರಿಣಾಮ ಎದುರಿಸುವ ಸಾಧ್ಯತೆಯಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿಯಮಗಳ ಪ್ರಕಾರ, ಹರಾಜಿನಲ್ಲಿ ಆಯ್ಕೆಯಾದ ನಂತರ ಟೂರ್ನಿಯಿಂದ ಹಿಂದೆ ಸರಿಯುವ ವಿದೇಶಿ ಆಟಗಾರರಿಗೆ ಎರಡು ವರ್ಷಗಳ ನಿಷೇಧ ವಿಧಿಸಲಾಗುತ್ತದೆ. ಇದರಿಂದ ಡಕೆಟ್ ಮುಂದಿನ ಎರಡು ಐಪಿಎಲ್ ಸೀಸನ್‌ಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಹ್ಯಾರಿ ಬ್ರೂಕ್ ಇದೇ ಕಾರಣಕ್ಕೆ ನಿಷೇಧ ಎದುರಿಸಿದ್ದರು. ಇದೀಗ ಡಕೆಟ್ ನಿರ್ಧಾರ ಡೆಲ್ಲಿ ತಂಡದ ಸಿದ್ಧತೆಗಳ ಮೇಲೆ ಪರಿಣಾಮ ಬೀರಿದೆ.

Leave a Reply

Your email address will not be published. Required fields are marked *

error: Content is protected !!