ಉದಯವಾಹಿನಿ, ರಿಷಬ್ ಶೆಟ್ಟಿ ಕರ್ನಾಟಕದ ಪ್ಯಾನ್ ಇಂಡಿಯಾ ಸ್ಟಾರ್ ನಟ. ‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್ 1’ ಸಿನಿಮಾದ ಬಳಿಕ ರಿಷಬ್ರ ಖ್ಯಾತಿ ದೇಶದೆಲ್ಲೆಡೆ ಹರಡಿದೆ. ‘ಕಾಂತಾರ ಚಾಪ್ಟರ್ 1’ ಬಳಿಕ ಅವರಿಗೆ ತೆಲುಗು, ಬಾಲಿವುಡ್ನಿಂದಲೂ ಆಫರ್ಗಳು ಬರುತ್ತಿದ್ದು, ಇದೀಗ ರಿಷಬ್ ಅವರು ತೆಲುಗಿನ ‘ಜೈ ಹನುಮಾನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಹೊಸ ಸಿನಿಮಾದ ತಯಾರಿಯಲ್ಲಿ ತೊಡಗಿರುವ ಸುಳಿವನ್ನೂ ಸಹ ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದಾರೆ.
‘ಕಾಂತಾರ: ಚಾಪ್ಟರ್ 2’ ಸಿನಿಮಾದ ಬಳಿಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ನಡುವೆ ವೈಮನಸ್ಯ ಮೂಡಿತೇ ಎಂಬ ಅನುಮಾನ ಶುರುವಾಗಿತ್ತು. ಅದಕ್ಕೆ ಮುಖ್ಯ ಕಾರಣವಾಗಿದ್ದು, ರಿಷಬ್ ಅವರು ಕೆಲ ವಾರದ ಹಿಂದಷ್ಟೆ ಹೊಂಬಾಳೆ ಫಿಲಮ್ಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಮಾಡಿದ್ದರು. ಇದು ದೊಡ್ಡ ಸುದ್ದಿಯೇ ಆಯ್ತು. ಇದೀಗ ರಿಷಬ್ ಶೆಟ್ಟಿ, ತಮ್ಮ ಗೆಳೆಯ ರಾಜ್ ಬಿ ಶೆಟ್ಟಿ ಮತ್ತು ‘ಕಾಂತಾರ’ ನಾಯಕಿ ರುಕ್ಮಿಣಿ ವಸಂತ್ ಅವರನ್ನೂ ಅನ್ಫಾಲೋ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇನ್ಸ್ಟಾಗ್ರಾಂನಲ್ಲಿ ರಿಷಬ್ ಶೆಟ್ಟಿ ಅವರು 140ಕ್ಕೂ ಹೆಚ್ಚು ಮಂದಿ ಸಿನಿಮಾ ಸೆಲೆಬ್ರಿಟಿಗಳು, ಕೆಲವು ರಾಜಕಾರಣಿಗಳನ್ನು ಫಾಲೋ ಮಾಡುತ್ತಾರೆ. ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಜೆಪಿ ತುಮ್ಮಿನಾಡ್ ಇನ್ನೂ ಹಲವರನ್ನು ರಿಷಬ್ ಶೆಟ್ಟಿ ಫಾಲೋ ಮಾಡುತ್ತಾರೆ. ಆದರೆ ಅವರು ಫಾಲೋ ಮಾಡುವವರ ಪಟ್ಟಿಯಲ್ಲಿ ರಾಜ್ ಬಿ ಶೆಟ್ಟಿ ಅವರ ಹೆಸರಿಲ್ಲ. ರಿಷಬ್ ಶೆಟ್ಟಿ ಅವರು ರಾಜ್ ಬಿ ಶೆಟ್ಟಿ ಅವರನ್ನು ಅನ್ಫಾಲೋ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಂತೆಯೇ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ನಾಯಕಿ ರುಕ್ಮಿಣಿ ವಸಂತ್ ಅವರನ್ನೂ ಫಾಲೋ ಮಾಡುತ್ತಿಲ್ಲ ಅಥವಾ ರಿಷಬ್ ಅವರು ರುಕ್ಮಿಣಿ ವಸಂತ್ ಅವರನ್ನು ಅನ್ಫಾಲೋ ಮಾಡಿದ್ದಾರೆ.
