ಉದಯವಾಹಿನಿ, ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ‘RRR’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಅವರಿಗೆ, ಇತ್ತೀಚಿನ ಚಿತ್ರಗಳಾದ ‘ಆಚಾರ್ಯ’ ಮತ್ತು ‘ಗೇಮ್ ಚೇಂಜರ್’ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿವೆ. ಈ ಸಂಭ್ರಮದ ನಡುವೆಯೇ, ಅವರ ಬಹುನಿರೀಕ್ಷಿತ ಚಿತ್ರ ‘ಪೆದ್ದಿ’ಯ ಹೊಸ ಟೀಸರ್ ಇಂದು ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.
ಹಿಂದಿನ ಟೀಸರ್ ಹಾಗೂ ಪೋಸ್ಟರ್‌ಗಳಲ್ಲಿ ರಾಮ್ ಚರಣ್ ಹಳ್ಳಿಯ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಆದರೆ, ಇಂದು ಬಿಡುಗಡೆಯಾದ ಟೀಸರ್‌ನಲ್ಲಿ ಅವರು ‘ಪೆದ್ದಿ ಪೆಹಲ್ವಾನ್’ ಆಗಿ ಸಖತ್ ರಗಡ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಧಾನ್ಯದ ಚೀಲಗಳನ್ನು ಸುಲಭವಾಗಿ ಎತ್ತಿ ಎಸೆಯುವುದು, ಅಖಾಡದಲ್ಲಿ ಕುಸ್ತಿ ಮಾಡುವುದು ಮತ್ತು ಆಂಜನೇಯನ ಗದೆಯಂತಹ ವಸ್ತುವನ್ನು ಲೀಲಾಜಾಲವಾಗಿ ತಿರುಗಿಸುವ ಮೂಲಕ ತಮ್ಮ ದೈಹಿಕ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!