ಉದಯವಾಹಿನಿ, ಕ್ರಿಕೆಟ್ ಪ್ರೇಮಿಗಳ ದೀರ್ಘ ಕಾಯುವಿಕೆ ಕೊನೆಗೊಳ್ಳುವ ಸಮಯ ಬಂದಿದೆ. ಫೀಲ್ಡಿಂಗ್ ಸೆಟ್ ಆಗಿದೆ, ಪಿಚ್ ಸಿದ್ಧವಾಗಿದೆ, ಇನ್ನು ಕೇವಲ ಬ್ಯಾಟ್ ಮತ್ತು ಬಾಲ್‌ಗಳ ನಡುವಿನ ಅಬ್ಬರ ಬಾಕಿ ಉಳಿದಿದೆ.
ಪ್ರಸಕ್ತ ಐಪಿಎಲ್ ಹಬ್ಬದ ಮೊದಲ ದಿನದ ಮೊದಲ ಪಂದ್ಯದಲ್ಲೇ ಎರಡು ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ಮುಖಾಮುಖಿಯಾಗುತ್ತಿವೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘ಈ ಸಲ ಕಪ್ ನಮ್ಮೆ’ ಎಂಬ ಘೋಷವಾಕ್ಯದೊಂದಿಗೆ ವಿರಾಟ್ ಕೊಹ್ಲಿ ಪಡೆ ಅಖಾಡಕ್ಕಿಳಿಯಲು ಸನ್ನದ್ದವಾಗಿದೆ. ಇನ್ನೊಂದೆಡೆ, ಆಕ್ರಮಣಕಾರಿ ಆಟಕ್ಕೆ ಹೆಸರಾದ ಹೈದರಾಬಾದ್ ತಂಡವು
ಆತಿಥೇಯರಿಗೆ ತಕ ಉತ್ತರ ನೀಡಲು ಕಾತುರದಿಂದ ಕಾಯುತಿದೆ.
