ಉದಯವಾಹಿನಿ, ಹಾಂಗಕಾಂಗ : ವಿಡಿಯೋ ರೀಲ್ಸ್ ಮಾಡಲು ಹೋಗಿ ಪ್ರಪಂಚದಾದ್ಯಂತದ ವಿವಿಧ ಗೋಪುರಗಳು ಹಾಗೂ ಗಗನಚುಂಬಿ ಕಟ್ಟಡಗಳನ್ನು ಏರಿ ಹೆಸರುವಾಸಿಯಾದ ಮೂವತ್ತರ ಹರೆಯದ ರೆಮಿ ಲುಸಿಡಿ ೬೮ನೇ ಮಹಡಿಯಿಂದ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ.
ವರದಿಯಾಗಿದೆ. ಸಾಹಸ ಕ್ರೀಡೆಗಳಿಗೆ ಹೆಸರಾದ ರೆಮಿ ಲುಸಿಡಿ ಫ್ರೆಂಚ್ ‘ಡೇರ್ ಡೆವಿಲ್’ ಎಂದೇ ಖ್ಯಾತಿಯಾಗಿದ್ದರು.
ಲುಸಿಡಿ ೭೨೧ ಅಡಿ ಎತ್ತರದ ಟ್ರೆಗುಂಟರ್ ಟವರ್‌ನ ೬೮ ನೇ ಮಹಡಿಯನ್ನು ತಲುಪಿದ್ದರು. ಆದರೆ ೬೮ನೇ ಮಹಡಿಯವರೆಗೆ ಹತ್ತಿದ ರೆಮಿ ಲುಸಿಡಿ ಅಲ್ಲಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಟ್ರೆಗುಂಟರ್ ಟವರ್ ಇದು ಹಾಂಗ್ ಕಾಂಗ್‌ನ ಎತ್ತರದ ವಸತಿ ಕಟ್ಟಡವಾಗಿದೆ. ಸಂಜೆ ೭.೩೦ರ ವೇಳೆಗೆ ಕಟ್ಟಡ ಸಮೀಪ ಬಂದಿದ್ದ ರೆಮಿ ಲುಸಿಡಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ೪೦ನೇ ಮಹಡಿಯಲ್ಲಿರುವ ತನ್ನ ಸ್ನೇಹಿತನ ಭೇಟಿಗೆ ಬಂದಿದ್ದಾಗಿ ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!