
ಉದಯವಾಹಿನಿ ಕುಶಾಲನಗರ:-ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರಿ ಹಾಗೂ ಉಪಾಧ್ಯಕ್ಷರಾಗಿ ಪುಷ್ಪಲತಾ ಆಯ್ಕೆ ಯಾಗಿದ್ದಾರೆ.
ಒಟ್ಟು 14 ಮತಗಳಲ್ಲಿ ಒಬ್ಬರು ಗೈರು ಹಾಜರಾಗಿದ್ದು 13 ಮತಗಳು ಚಲಾವಣೆಯಾದವು ಅದರಲ್ಲಿ ಒಂದು ಮತ ತಿರಸ್ಕೃತಗೊಂಡಿತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅರುಣ ಕುಮಾರಿಯವರಿಗೆ ಏಳು ಮತಗಳು ಹಾಗೂ ರತ್ನಮ್ಮನವರಿಗೆ 5 ಮತಗಳು ಬಂದಿದ್ದು. ಅರುಣ್ ಕುಮಾರಿ ಅವರು ಮುಂದಿನ ಎರಡುವರೆ ವರ್ಷದ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಹಾಗೆ ಉಪಾಧ್ಯಕ್ಷರಾಗಿ ಪುಷ್ಪಲತಾ ಮತ್ತು ನಾರಾಯಣರವರು ಸ್ಪರ್ಧಿಸಿದ್ದು ಪುಷ್ಪಲತಾ ರವರು ಏಳು ಮತಗಳನ್ನು ಪಡೆದು ಜಯಶೀಲರಾದರೆ ನಾರಾಯಣ್ ರವರು ಐದು ಮತಗಳನ್ನು ಪಡೆದು ಪರಾಭವ ಗೂಂಡರು.
